ಉತ್ತರ ಭಾರತದಲ್ಲಿ ಹೀಟ್‌ ವೇವ್‌: ದಕ್ಷಿಣದಲ್ಲಿ ಮಳೆ ಸಾಧ್ಯತೆ!

masthmagaa.com:

ದಕ್ಷಿಣದ ರಾಜ್ಯಗಳಲ್ಲಿ ಮಳೆ ಶುರುವಾಗಿದ್ರೆ ಅತ್ತ ರಾಷ್ಟ್ರ ರಾಜಧಾನಿ ಸೇರಿದಂತೆ ಉತ್ತರ ಭಾರತದ ಅನೇಕ ಕಡೆ ಹೀಟ್‌ ವೇವ್‌ ಮುಂದುವರೆದಿದೆ. ಮುಂದಿನ ಐದು ದಿನಗಳಲ್ಲಿ ದಿಲ್ಲಿ ಸೇರಿದಂತೆ ಹರ್ಯಾಣ, ಪಂಜಾಬ್‌, ರಾಜಸ್ತಾನ್‌, ಯುಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಹೀಟ್‌ ವೇವ್‌ ಸಂಬಂಧ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇಲ್ಲೆಲ್ಲಾ 45ರಿಂದ 47ಕ್ಕೂ ಅಧಿಕ ಡಿಗ್ರಿ ಸೆಲ್ಸಿಯನ್‌ ತಾಪಮಾನ ಇರೋ ಸಾಧ್ಯತೆ ಇದೆ. ಇನ್ನೊಂದು ಕಡೆ ದಕ್ಷಿಣ ಭಾರತಲ್ಲಿ ಮಳೆ ಬರೋ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಬುಧವಾರದಿಂದ ಮೂರು ದಿನಗಳ ಕಾಲ ಕರ್ನಾಟಕ, ಲಕ್ಷದ್ವೀಪ, ತಮಿಳುನಾಡು, ಪಾಂಡಿಚೇರಿ ಹಾಗೂ ಕೇರಳದಲ್ಲಿ ಭಾರಿ ಮಳೆಯಾಗ್ಬಹುದು ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ನೈರುತ್ಯ ಮುಂಗಾರು ಮೇ 31ರಂದು ಕೇರಳ ಪ್ರವೇಶಿಸೊ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply