ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ದಾಳಿ! ರಾಜೀನಾಮೆ ನೀಡಿದ ಇಸ್ರೇಲ್‌ ಅಧಿಕಾರಿ!

masthmagaa.com:

ಇರಾನ್‌ ಮತ್ತು ಹಮಾಸ್‌ ವಿರುದ್ದ ಹೋರಾಡ್ತಿರೊ ಇಸ್ರೇಲ್‌ ಮೇಲೆ ಈಗ ಹಿಜ್ಬುಲ್ಲಾ ಪಡೆ ದಾಳಿ ಮಾಡಿದೆ. 35 ರಾಕೆಟ್‌ಗಳ ಮೂಲಕ ಇಸ್ರೇಲ್‌ನ ಸಫೇದ್‌ ನಗರದ ಮೇಲೆ ಲೆಬೆನಾನ್‌ನ ಹಿಜ್ಬುಲ್ಲಾಗಳು ದಾಳಿ ಮಾಡಿದ್ದಾರೆ. ದಕ್ಷಿಣ ಲೆಬೆನಾನ್‌ನಲ್ಲಿನ ದಾಳಿಗೆ ಪ್ರತಿಯಾಗಿ ನಾವು ಈ ಕತ್ಯುಷಾ ರಾಕೆಟ್‌ಗಳ ಮೂಲಕ ದಾಳಿ ನಡೆಸಿದ್ದೇವೆ ಅಂತ ಖುದ್ದು ಹಿಜ್ಬುಲ್ಲಾ ಪಡೆ ಹೇಳ್ಕೊಂಡಿದೆ. ಆದ್ರೆ ನಾವು ಈ ರಾಕೆಟ್‌ಗಳ ದಾಳಿಯನ್ನ ಸಮರ್ಥವಾಗಿ ಹಿಮ್ಮೆಟ್ಟಿಸಿದ್ದು , ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ ಅಂತ ಇಸ್ರೇಲ್‌ ರಕ್ಷಣಾ ಪಡೆ ತಿಳಿಸಿದೆ. ಮತ್ತೊಂದೆಡೆ ಇಸ್ರೇಲ್‌ ಸೇನೆಯ ಗುಪ್ತಚರ ವಿಭಾಗದ ಮುಖ್ಯಸ್ಥ ಜನರಲ್‌ ಅಹರಾನ್ ಹಾಲಿವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಸ್ರೇಲ್‌ ಮೇಲೆ ಅಕ್ಟೋಬರ್‌ 7ರಂದು ನಡೆದ ಹಮಾಸ್‌ ದಾಳಿಯಲ್ಲಿ ಇಂಟಲಿಜೆನ್ಸಿ ಫೆಲ್ಯೂವರ್‌ನಿಂದಾಗಿ ಹಾಲಿವಾ ರಾಜೀನಾಮೆ ನೀಡಿದ್ದಾರೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply