ಗ್ಯಾನವಾಪಿ ಮಸೀದಿ ವಿವಾದ! ಪೂಜೆಗೆ ಹೈಕೋರ್ಟ್‌ ಬೆಂಬಲ!

masthmagaa.com:

ವಾರಣಾಸಿ ಕೋರ್ಟ್‌ ಆದೇಶದಂತೆ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಿರೋ ಬೆನ್ನಲ್ಲೇ ಇದೀಗ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಜೊತೆಗೆ ಫೆಬ್ರುವರಿ 02 ರಂದು ಅಂದ್ರೆ ಇಂದು ವಾರಣಾಸಿ ಬಂದ್‌ಗೆ ಕರೆ ಕೊಟ್ಟಿದ್ವು. ಅದರಂತೆ ತಮ್ಮ ಅಂಗಡಿ ಮುಂಗಟ್ಟುಗಳನ್ನ ಬಂದ್‌ ಮಾಡಿ, ಹಲವು ಸ್ಥಳಗಳಲ್ಲಿ ಜುಮಾ ಪ್ರಾರ್ಥನೆ ಸಲ್ಲಿಸಿವೆ. ಕಾನೂನು ಸುವ್ಯವಸ್ಥೆ ಕಾಪಾಡೋಕೆ ಮಸೀದಿ ಸುತ್ತಲೂ ಸೆಕ್ಯುರಿಟಿ ನಿಯೋಜಿಸಲಾಗಿದೆ. ಇನ್ನು ವಾರಣಾಸಿಯ ಅಂಜುಮನ್‌ ಇಂತೇಜಾಮಿಯಾ ಮಸೀದಿ ಸಮಿತಿ ಗ್ಯಾನ್‌ವಾಪಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಹಿಂದೂಗಳಿಗೆ ಪೂಜೆ ನಡೆಸೋಕೆ ವಾರಣಾಸಿ ಕೋರ್ಟ್‌ ಕೊಟ್ಟಿದ್ದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದ್ರೆ ಈ ವಿಚಾರವಾಗಿ ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗುವಂತೆ ಸಮಿತಿಗೆ ಸುಪ್ರಿಂ ಕೋರ್ಟ್ ಸೂಚನೆ ನೀಡಿದೆ. ಇದರಂತೆ ಈ ಸಮಿತಿ ಅಲಹಾಬಾದ್‌ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ತಿರಸ್ಕರಿಸಿದೆ. ಇನ್ನು ಪ್ರಕರಣದ ಮುಂದಿನ ವಿಚಾರಣೆ ಫೆಬ್ರುವರಿ 6 ರಂದು ನಡೆಯಲಿದೆ.

-masthmagaa.com

Contact Us for Advertisement

Leave a Reply