ಇರಾನ್: ಹಿಜಬ್‌ ಧರಿಸಿದ ಮಹಿಳೆಯರ ಮೇಲೆ ಮೊಸರು ಎರಚಿದ ವ್ಯಕ್ತಿ

masthmagaa.com:

ಹಿಜಬ್‌ ಧರಿಸಿದ ಇಬ್ಬರು ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಮೊಸರನ್ನ ಎರಚಿರೊ ಘಟನೆ ಇರಾನ್‌ನಲ್ಲಿ ನಡೆದಿದೆ. ಬಳಿಕ ಮೊಸರು ಎರಚಿದ ವ್ಯಕ್ತಿ ವಿರುದ್ದ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಿಲಾಗಿದೆ. ಇತ್ತ ಇರಾನ್‌ನ ಮಹಿಳಾ ಡ್ರೆಸ್‌ ಕೋಡ್‌ನ್ನ ಫಾಲೋ ಮಾಡದೇ ಇದ್ದಕ್ಕೆ ಇಬ್ಬರು ಮಹಿಳೆಯರ ವಿರುದ್ಧವೂ ಅರೆಸ್ಟ್‌ ವಾರೆಂಟ್‌ ಜಾರಿ ಮಾಡಲಾಗಿದೆ. ವ್ಯಕ್ತಿ ಮೊಸರು ಎರಚಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ, ಇದಕ್ಕೆ ಪ್ರತಿಕ್ರಿಯಿಸಿರೊ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ಇರಾನ್‌ನಲ್ಲಿ ಹಿಜಬ್‌ ಕಾನೂನು ಇದೆ. ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಇತ್ತ ಇರಾನ್‌ನ ಡ್ರೆಸ್‌ ಕೋಡ್‌ನ್ನ ಉಲ್ಲಂಘಿಸುವ ಮಹಿಳೆಯರ ವಿರುದ್ಧ ಯಾವುದೇ ಅಳುಕು ಇಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಅಂತ ಇರಾನ್‌ನ ನ್ಯಾಯಾಂಗ ಮುಖ್ಯಸ್ಥ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply