ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚಲು ಮುಂದಾದ ಕೇಂದ್ರ ಸರ್ಕಾರ!

masthmagaa.com:

ಶಿವಮೊಗ್ಗದ ಭದ್ರಾವತಿಯಲ್ಲಿರೊ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VIASL) ಮುಚ್ಚೋಕೆ ಸ್ಟೀಲ್‌ ಆಥಾರಿಟಿ ಆಫ್‌ ಇಂಡಿಯಾ (SAIL) ನಿರ್ಣಯ ಕೈಗೊಂಡಿದೆ. ಇದರ ಬೆನ್ನಲ್ಲೇ ಅಲ್ಲಿನ ಜನರು, ಕಾರ್ಮಿಕರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ. BJPಗೆ ಮಾನ ಮರ್ಯಾದೆ ಏನೂ ಇಲ್ಲ, VIASL ಫ್ಯಾಕ್ಟರಿಯನ್ನ ಉಳಿಸುತ್ತೇವೆ ಅಂತ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಬಡಾಯಿ ಕೊಚ್ಚಿಕೊಂಡು ಈಗ ಜನರಿಗೆ ಮೋಸ ಮಾಡಿದ್ದಾರೆ ಅಂತ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ವರ ಕಿಡಿಕಾರಿದ್ದಾರೆ. ಇತ್ತ ಕಾರ್ಖಾನೆಯನ್ನ ಮುಚ್ಚದಂತೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕ ಸಂಘದವರು ಹೋರಾಟ ನಡೆಸಿದ್ದಾರೆ. ಬಿಎಸ್‌ವೈ ಹಾಗೂ ಅವರ ಪುತ್ರನ ವಿರುದ್ದ ಹರಿಹಾಯ್ದಿದ್ದಾರೆ. ನಷ್ಟದ ನೆಪವೊಡ್ಡಿ ಕಾರ್ಖಾನೆ ಮುಗಿಸಲು ಹುನ್ನಾರ ನಡೆಸಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾರ್ಖಾನೆಯ ಪುನಶ್ಚೇತನಕ್ಕಾಗಿ ಸ್ಟೀಲ್‌ ಆಥಾರಿಟಿಗೆ ನೀಡಲಾಗಿತ್ತು. ಆದರೆ ಈ ತನಕ ಯಾವುದೇ ಬಂಡವಾಳ ಹಾಕಿಲ್ಲ. ಉತ್ತರ ಭಾರತದವರು, ದಕ್ಷಿಣ ಭಾರತದವರ ಮೇಲೆ ಮಲತಾಯಿ ಧೋರಣೆ ಮಾಡಿಕೊಂಡು ಬಂದಿದ್ದಾರೆ. ಒಂದು ರೂಪಾಯಿ ಬಂಡವಾಳ ಹಾಕದೇ ಕಾರ್ಖಾನೆ ನಷ್ಟ ಅನುಭವಿಸಿದೆ ಅಂತ ಹೇಳೋದು ಫ್ಯಾಕ್ಟರಿಯನ್ನ ಮುಚ್ಚುವ ಹುನ್ನಾರ. ಈ ಕಾರ್ಖಾನೆ ಮುಚ್ಚುವ ಹಂತಕ್ಕೆ ಹೋದ್ರೆ ಉಗ್ರ ಹೋರಾಟ ಮಾಡ್ತೇವೆ ಅಂತ ಗುತ್ತಿಗೆ ಕಾರ್ಮಿಕರ ಸಂಘದ ಮುಖ್ಯಸ್ಥ ರಾಕೇಶ್‌ ಹೇಳಿದ್ದಾರೆ. ಇನ್ನು ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಫ್ಯಾಕ್ಟರಿ ಕರ್ನಾಟಕದ ಹೆಮ್ಮೆ ಅದನ್ನ ಮುಚ್ಚುವ ಆದೇಶವನ್ನ ಹಿಂತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಅಂದ್ಹಾಗೆ ಈ ಕಾರ್ಖಾನೆಗೆ 100 ವರ್ಷಗಳ ಇತಿಹಾಸವಿದೆ. 1918ರಲ್ಲಿ ಅಂದಿನ ಮೈಸೂರಿನ ದಿವಾನರಾಗಿದ್ದ ಸರ್‌.ಎಂ ವಿಶ್ವೇಶ್ವರಯ್ಯ ಅವರ ಮುಂದಾಳತ್ವದಲ್ಲಿ ಅಡಿಪಾಯ ಹಾಕಲಾಗಿತ್ತು. ಹಾಗೂ 1923ರಲ್ಲಿ ಕಬ್ಬಿಣ ಹಾಗು ಉಕ್ಕಿನ ಉತ್ಪಾದನೆ ಆರಂಭವಾಗಿತ್ತು. ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇದ್ದ ಹೇರಳ ಕಬ್ಬಿಣದ ಅದಿರು ನಿಕ್ಷೇಪಗಳನ್ನ ಉಪಯೋಗಿಸಿ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು.

-masthmagaa.com

Contact Us for Advertisement

Leave a Reply