ಪಾಕ್‌ ಸ್ಪೈಗೆ BSF ಮಾಹಿತಿ ರವಾನೆ! ಮತ್ತೊಂದು ಹನಿಟ್ರ್ಯಾಪ್‌?

masthmagaa.com:

ನಿನ್ನೆಯಷ್ಟೆ DRDO ವಿಜ್ಞಾನಿ ಪ್ರದೀಪ್‌ ಕುರಲ್ಕರ್‌ ಹನಿಟ್ರ್ಯಾಪ್‌ ಕೇಸ್‌ಗೆ ಸಂಬಂಧಿಸಿದಂತೆ ಶಾಕಿಂಗ್‌ ವಿಚಾರಗಳು ಹೊರ ಬಂದಿದ್ವು. ಇದೀಗ ಅದೇ ರೀತಿಯ ಇನ್ನೊಂದ್‌ ಕೇಸ್‌ ಗುಜರಾತ್‌ನಲ್ಲಿ ಬೆಳಕಿಗೆ ಬಂದಿದೆ. BSF (Border Security Force) ಕುರಿತ ಕೆಲವು ಮಾಹಿತಿಗಳನ್ನ ಪಾಕಿಸ್ತಾನ ಸ್ಪೈಗೆ ಶೇರ್‌ ಮಾಡಿರೋದು ಗೊತ್ತಾಗಿದೆ. ಗುಜರಾತ್‌ನ ಭುಜ್‌ನ BSF ಹೆಡ್‌ಕ್ವಾಟರ್ಸ್‌ ಕ್ಯಾಂಪಸ್‌ನಲ್ಲಿರೋ CPWD (Central Public Works Department) ಕಚೇರಿಯಲ್ಲಿ ಕಾಂಟ್ರ್ಯಾಕ್ಟ್‌ ಉದ್ಯೋಗಿ ನೀಲೇಶ್‌ ಬಲಿಯಾ ಅನ್ನೋರು ಪಾಕಿಸ್ತಾನಿ ಗೂಢಚಾರಿಣಿಗೆ BSF ಕುರಿತ ಮಾಹಿತಿ ಶೇರ್‌ ಮಾಡಿದ್ದು, ಈತನನ್ನ ATS (Anti-Terrorism Squad) ಅಧಿಕಾರಿಗಳು ಬಂಧಿಸಿದ್ದಾರೆ. ಈ ಪಾಕ್‌ ಸ್ಪೈ ತನ್ನನ್ನ ʻಅದಿತಿ ತಿವಾರಿʼ ಅಂತ ಪರಿಚಯಿಸಿಕೊಂಡಿದ್ದು, ಕಾರ್ಪೋರೇಟ್‌ ಕಂಪನಿಯೊಂದ್ರಲ್ಲಿ ಕೆಲಸ ಮಾಡ್ತಿರೋದಾಗಿ ಹೇಳಿಕೊಂಡಿದ್ದಾಳೆ. ಆರೋಪಿ ನೀಲೇಶ್‌ ಹಾಗೂ ಅದಿತಿ ವಾಟ್ಸಾಪ್‌ನಲ್ಲಿ ಕಾಂಟ್ಯಾಕ್ಸ್‌ ಇಟ್ಕೊಂಡಿದ್ರು. ಅಲ್ದೆ ಈ ಗೂಢಾಚಾರಿಣಿಯನ್ನ ನೀಲೇಶ್‌ ಲವ್‌ ಮಾಡ್ತಿದ್ದು, ನಿರ್ಮಾಣ ಹಂತದಲ್ಲಿರೋ BSF ಬಿಲ್ಡಿಂಗ್‌ಗಳು ಹಾಗೂ ಸಿವಿಲ್‌ ಡಿಪಾರ್ಟ್‌ಮೆಂಟ್‌ ಸೇರಿದಂತೆ ಕೆಲವು ರಹಸ್ಯ ಮಾಹಿತಿಗಳನ್ನ ಆಕೆಗೆ ನೀಡಿದ್ದಾನೆ ಅಂತ ATS ಹೇಳಿದೆ. ಜೊತೆಗೆ ನೀಲೇಶ್‌ ಅಕೌಂಟ್‌ಗೆ 28 ಸಾವಿರ ರೂಪಾಯಿ ಹಣವನ್ನ UPI ಮೂಲಕ ನೀಡಲಾಗಿದ್ದು, 8 ಅನುಮಾನಾಸ್ಪದ ಹಣ ವರ್ಗಾವಣೆ ಕಂಡು ಬಂದಿವೆ. ಹೀಗಾಗಿ ನೀಲೇಶ್‌ ಯಾರ ಬಳಿ ಸಂಪರ್ಕ ಹೊಂದಿದ್ದ ಹಾಗೂ ಈ ಹಣವನ್ನ ಯಾರು ಏನಕ್ಕಾಗಿ ಕೊಟ್ಟಿದ್ದಾರೆ ಅನ್ನೋ ಎಲ್ಲಾ ವಿಚಾರವಾಗಿ ತನಿಖೆ ನಡೆಸಲಾಗ್ತಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೆ ಅಲ್ದೆ ಆರೋಪಿ ನೀಲೇಶ್‌ ವಾಟ್ಸಾಪ್‌ನಲ್ಲಿ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್ ಅನ್ನ ಆನ್‌ ಮಾಡಿಕೊಂಡು ಚಾಟ್‌ ಮಾಡಿರೋದ್ರಿಂದ ಚಾಟ್‌ ಹಿಸ್ಟರಿ ಡಿಲೀಟ್‌ ಆಗಿದೆ. ಆದ್ರೆ ಈ ಎಲ್ಲಾ ಚಾಟ್‌ ಹಿಸ್ಟರಿಯನ್ನ ರಿಸ್ಟೋರ್‌ ಮಾಡಿ ಕಂಪ್ಲೀಟ್‌ ತನಿಖೆ ನಡೆಸಲಾಗುತ್ತೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply