ಸೌದಿ ಅರೇಬಿಯಾ: ಆನ್‌ಲೈನ್‌ ಪೋಸ್ಟ್‌ ಹಾಕಿದ್ದಕ್ಕೆ ಮರಣದಂಡನೆ ಶಿಕ್ಷೆ

masthmagaa.com:

ಸೌದಿ ಅರೇಬಿಯಾ ಸರ್ಕಾರದ ವಿರುದ್ಧ X ಹಾಗೂ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಹಾಕಿರುವ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ಮರಣ ದಂಡನೆ ವಿಧಿಸಲಾಗಿದೆ. ನಾಸರ್‌ ಅಲ್‌ ಘಮ್ದಿ ಅನ್ನೊ ವ್ಯಕ್ತಿ ಧರ್ಮ ನಿಂದನೆ, ಸಮಾಜದ ಭದ್ರತೆಗೆ ಧಕ್ಕೆ ಹಾಗೂ ಸರ್ಕಾರದ ವಿರುದ್ಧ ಪಿತೂರಿ ನಡೆಸಿದ್ದಾನೆ ಅಂತ ಆರೋಪಿಸಲಾಗಿದೆ. ಜೊತೆಗೆ ಸೌದಿ ಸರ್ಕಾರವನ್ನ ಟೀಕೆ ಮಾಡಿ ಹಾಕಲಾಗಿರುವ ಪೋಸ್ಟ್‌ಗಳನ್ನ ಈತ ರೀಶೇರ್‌ ಮಾಡಿದ್ದ ಅಂತ ಆರೋಪಿಸಲಾಗಿದೆ. ಈ ಕಾರಣಕ್ಕೆ ಅಲ್ಲಿನ ಕ್ರಿಮಿನಲ್‌ ಕೋರ್ಟ್‌ ಮರಣದಂಡನೆ ವಿಧಿಸಿದೆ. ಅಂದ್ಹಾಗೆ ಸೌದಿ ಅರೇಬಿಯಾದ ಆಡಳಿತದ ವಿರುದ್ಧ ಯಾವುದೇ ಪ್ರತಿಭಟನೆ ಅಥ್ವಾ ಟೀಕೆಗಳನ್ನ ಹತ್ತಿಕ್ಕಲು ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಈ ರೀತಿ ಆವಾಗಾವಾಗ ಉಗ್ರಶಿಕ್ಷೆ ವಿಧಿಸ್ತಿರ್ತಾರೆ.

-masthmagaa.com

Contact Us for Advertisement

Leave a Reply