ಕೆಂಪು ಸಮುದ್ರದಲ್ಲಿ ಮತ್ತೆ ಅಮೆರಿಕದಿಂದ ಹೌತಿಗಳಿಗೆ ತಕ್ಕ ಪಾಠ!

masthmagaa.com:

ಕೆಂಪು ಸಮುದ್ರದಲ್ಲಿ ಪುಂಡಾಟ ಮೆರೆಯೋ ಯೆಮೆನ್‌ನ ಹೌತಿಗಳಿಗೆ ಅಮೆರಿಕ ದಿನೇ ದಿನೇ ತಕ್ಕ ಪಾಠ ಕಲಿಸ್ತಿದೆ. ಇದೀಗ ತನ್ನ ಮಿತ್ರಪಡೆಗಳ ಯುದ್ದ ನೌಕೆಯೊಂದಿಗೆ ಅಮೆರಿಕದ ಯುದ್ಧವಿಮಾನ ಹೌತಿಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿದೆ. ದಾಳಿ ವೇಳೆ ಹೌತಿಗಳ ಐದು ಡ್ರೋನ್‌ಗಳನ್ನ (UAV) ಹೊಡೆದುರುಳಿಸಿದೆ. ‘ವ್ಯಾಪಾರ ಹಾಗೂ ನಮ್ಮ ಹಡಗುಗಳ ಸುರಕ್ಷತೆಗಾಗಿ ಈ ದಾಳಿ ಮಾಡಿದ್ದೇವೆ’ ಅಂತ ಅಮೆರಿಕನ್‌ ಸೆಂಟ್ರಲ್‌ ಕಮಾಂಡ್‌ ಹೇಳಿದೆ.

-masthmagaa.com

Contact Us for Advertisement

Leave a Reply