ಅಮೆರಿಕ ಹಡಗಿನ ಮೇಲೆ ಹೌತಿ ಮಿಸೈಲ್!

masthmagaa.com:

ನಿನ್ನೆ ಇಸ್ರೇಲ್‌ ಸಂಬಂಧಿತ ಟ್ಯಾಂಕರ್‌ ಹಡಗೊಂದನ್ನ ಏಡನ್‌ ಕೊಲ್ಲಿ ಬಳಿ ಬಂಡುಕೋರರ ದಾಳಿಯಿಂದ ಅಮೆರಿಕದ USS Mason ಯುದ್ಧನೌಕೆ ರಕ್ಷಿಸಿರೋದಾಗಿ ಅಮೆರಿಕ ಹೇಳಿದೆ. ʻಸೆಂಟ್ರಲ್‌ ಪಾರ್ಕ್‌ʼ ಹೆಸರಿನ ಈ ಹಡಗಿನ ಮೇಲೆ ಯೆಮನ್‌ನ ಹೌತಿ‌ ಬಂಡುಕೋರರು ದಾಳಿ ನಡೆಸಿರ್ಬೋದು ಅಂತ ಶಂಕಿಸಲಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಇಂದು ಹೌತಿ ಸಂಘಟನೆ ಎರಡು ಬ್ಯಾಲಸ್ಟಿಕ್‌ ಮಿಸೈಲ್‌ಗಳನ್ನ ಫೈರ್‌ ಮಾಡಿದೆ. US ಹಡಗಿನಿಂದ ಸುಮಾರು 16 ಕಿಲೋಮೀಟರ್‌ ದೂರದಲ್ಲಿ ಈ ಕ್ಷಿಪಣಿಗಳು ಬಿದ್ದಿವೆ ಅಂತ ಅಮೆರಿಕ ಹೇಳಿದೆ.ಇತ್ತ ತಾತ್ಕಾಲಿಕ ಕದನ ವಿರಾಮವನ್ನ ಎಕ್ಸ್‌ಟೆಂಡ್‌ ಮಾಡೋಕೆ ಇಸ್ರೇಲ್‌- ಹಮಾಸ್‌ಗಳು ಎದುರು ನೋಡ್ತಿವೆ ಅಂತ ಕತಾರ್‌ನ ಅಧಿಕಾರಿಯೊಬ್ರು ತಿಳಿಸಿದ್ದಾರೆ. ನಾಲ್ಕು ದಿನಗಳ ವಿರಾಮದ ಕೊನೆಯ ದಿನವಾದ ಇಂದು ಈ ಬಗ್ಗೆ ಮಾತುಕತೆ ನಡೆದಿದೆ. ಈ ಮೊದಲು ಸೀಜ್‌ ಫೈರ್‌ ಮುಗಿದ ನಂತರವೂ ಪ್ರತಿದಿನ 10 ಹಾಸ್ಟೇಜ್‌ಗಳನ್ನು ರಿಲೀಸ್‌ ಮಾಡಿದ್ರೆ, ಅದಕ್ಕೆ ಪ್ರತಿಯಾಗಿ ತಾನೂ ಮೂರರಷ್ಟು ಪ್ಯಾಲಸ್ತೀನಿ ಖೈದಿಗಳನ್ನು ಬಿಡುಗಡೆ ಮಾಡ್ತೀವಿ. ಕದನ ವಿರಾಮವನ್ನ ಎಸ್ತರಣೆ ಮಾಡ್ತೀವಿ ಅಂತ ಇಸ್ರೇಲ್‌ ಹೇಳಿತ್ತು. ಇದೀಗ ಅದನ್ನ ಜಾರಿಗೊಳಿಸೊ ತರ ಕಾಣ್ತಿದೆ ಎನ್ನಲಾಗಿದೆ.

ಅತ್ತ ಇಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಸಂಪರ್ಕಕ್ಕಾಗಿ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ ಉಪಗ್ರಹಗಳ ಬಳಕೆ ಬಗ್ಗೆ ಮಾತುಕತೆ ನಡೆಸಲು ಮಸ್ಕ್ ಯುದ್ಧದ ನಡುವೆಯೇ ಇಸ್ರೇಲ್‌ಗೆ ಹಾರಿದ್ದಾರೆ. ಈ ವೇಳೆ ಇಸ್ರೇಲ್‌ ದೂರಸಂಪರ್ಕ ಸಚಿವಾಲಯದ ಅನುಮತಿ ಸಿಕ್ಕರಷ್ಟೆ ಗಾಜಾದಲ್ಲಿ ಸ್ಟಾರ್‌ಲಿಂಕ್‌ ಇಂಟರ್ನೆಟ್ ಸೇವೆ ನೀಡ್ಬೇಕು ಅನ್ನೊ ಒಪ್ಪಂದಕ್ಕೆ ಮಸ್ಕ್‌ ಸಹಿ ಹಾಕಿದ್ದಾರೆ. ಇನ್ನು ಯೂರೋಪಿಯನ್‌ ಒಕ್ಕೂಟ ಹಾಗೂ ಅರಬ್‌ ದೇಶಗಳ ಪ್ರತಿನಿಧಿಗಳು ಸ್ಪೇನ್‌ನ ಬಾರ್ಸಿಲೋನದಲ್ಲಿ ಮೀಟ್‌ ಮಾಡಿದ್ದಾರೆ. ಯೂನಿಯನ್‌ ಫಾರ್‌ ದ ಮೆಡಿಟರೇನಿಯನ್‌ ಅನ್ನೊ ಒಕ್ಕೂಟ ಆಯೋಜಿಸಿರೋ ಈ ಮೀಟಿಂಗ್‌ನಲ್ಲಿ ಗಾಜಾ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲಾಗತ್ತೆ ಅಂತ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply