ಹುಬ್ಬಳ್ಳಿಯ ಅಂಜಲಿ ಹತ್ಯೆ ಕೇಸ್‌: ಸಿಐಡಿ ತಂಡದಿಂದ ತನಿಖೆ ಚುರುಕು!

masthmagaa.com:

ಹುಬ್ಬಳ್ಳಿಯ ಅಂಜಲಿ ಹತ್ಯೆ ಕೇಸ್‌ನ್ನ ಕೈಗೆತ್ತಿಗೊಂಡಿರೊ ಸಿಐಡಿ ತಂಡ ತನಿಖೆಯನ್ನ ಚುರುಕುಗೊಳಿಸಿದೆ. ಆರೋಪಿ ವಿಶ್ವ ಅಲಿಯಾಸ್‌ ಗಿರೀಶ್‌ನನ್ನ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ದೆ ಹತ್ಯೆ ಬಳಿಕ ದಾವಣಗೆರೆಯಲ್ಲಿ ಸಾರ್ವಜನಿಕರಿಂದ ಹೊಡೆಸಿಕೊಂಡಿದ್ದ ವಿಶ್ವನನ್ನ ಪೋಲಿಸರು ಆಸ್ಪತ್ರೆಗೆ ದಾಖಲಿಸಿದ್ರು. ಈ ವೇಳೆ ಆಸ್ಪತ್ರೆ ಸಿಬ್ಬಂದಿಗೆ ಈ ವಿಶ್ವ ಧಮ್ಕಿ ಹಾಕಿದ್ದ ಅಂತ ತಿಳಿದು ಬಂದಿದೆ. ಅಂದ್ಹಾಗೆ ಮೇ 15ರಂದು ಅಂಜಲಿಯನ್ನ ವಿಶ್ವ ಹಾಡುಹಗಲೇ ಹತ್ಯೆ ಮಾಡಿದ್ದ.

-masthmagaa.com

Contact Us for Advertisement

Leave a Reply