ಮಣಿಪುರ: 12 ಬಂಡುಕೋರರನ್ನ ರಿಲೀಸ್‌ ಮಾಡಿದ ಸೇನೆ, ಯಾಕೆ?

masthmagaa.com:

ಮಣಿಪುರ ಹಿಂಸಾಚಾರ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಮಹಿಳೆಯರ ನೇತೃತ್ವದ 1200 ಜನರ ಗುಂಪು ಇಥಾಮ್ ಗ್ರಾಮವನ್ನು ಸುತ್ತುವರಿದ ಬೆನ್ನಲ್ಲೇ ಭಾರತೀಯ ಸೇನೆ 12 ಬಂಡುಕೋರರನ್ನ ಬಿಡುಗಡೆ ಮಾಡಿದೆ. ಹಿಂಸಾಚಾರ ಹತ್ತಿಕ್ಕುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರಕ್ಕೆ ಇದು ಭಾರಿ ಹಿನ್ನಡೆ ಉಂಟುಮಾಡಿದೆ. ನಾಗರಿಕರ ಜೀವಗಳನ್ನ ಅಪಾಯಕ್ಕೆ ತಳ್ಳಲು ತಾನು ಬಯಸಲ್ಲ. ಹೀಗಾಗಿ ಸಂಘರ್ಷವನ್ನು ತಡೆಯಲು ಉಗ್ರರನ್ನು ಬಿಡುಗಡೆ ಮಾಡಿರೋದಾಗಿ ಸೇನೆ ಹೇಳಿದೆ. ಇತ್ತ ಪ್ರಬುದ್ಧ ನಿರ್ಧಾರ ತೆಗೆದುಕೊಂಡಿರುವುದು ಭಾರತೀಯ ಸೇನೆಯ ಮಾನವೀಯ ಮುಖವನ್ನ ಪ್ರದರ್ಶಿಸಿದೆ ಅಂತ ಕಾರ್ಯಾಚರಣೆಯ ಕಮಾಂಡರ್‌ ಇನ್‌ಚಾರ್ಜ್‌ ಅವ್ರನ್ನ ಭಾರತೀಯ ಸೇನೆ ಶ್ಲಾಘಿಸಿದೆ. ಅಂದ್ಹಾಗೆ ಮೈತೇಯ ಸಮುದಾಯದ ತೀವ್ರಗಾಮಿಗಳ ಗುಂಪಿಗೆ ಸೇರಿದ 12 ಬಂಡುಕೋರರನ್ನ ಬಂಧಿಸಿತ್ತು. ಈ ಗುಂಪು 2015ರಲ್ಲಿ ಡೋಗ್ರಾ ಘಟಕ ದಾಳಿ ಸೇರಿದಂತೆ ಅನೇಕ ದಾಳಿಗಳಲ್ಲಿ ಭಾಗವಹಿಸಿತ್ತು ಅಂತ ಸೇನೆ ಹೇಳಿದೆ. ಇನ್ನು 12 ಬಂಡುಕೋರರನ್ನ ಬಂಧಿಸಿದ ವಿಷಯ ತಿಳಿದು 1200ಕ್ಕೂ ಹೆಚ್ಚಿನ ಜನ ಸೇನಾ ಕಾರ್ಯಾಚರಣೆಯ ಇಡೀ ಪ್ರದೇಶವನ್ನು ಸುತ್ತುವರೆದಿತ್ತು. ಅಲ್ದೇ ಅವ್ರನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಸ್ಥಳೀಯರ ಒತ್ತಾಯಕ್ಕೆ ಮಣಿದು ಅವ್ರನ್ನ ರಿಲೀಸ್‌ ಮಾಡಲಾಗಿದೆ. ಇತ್ತ ಮಣಿಪುರ ಸಿಎಂ ಎನ್‌. ಬಿರೇನ್‌ ಸಿಂಗ್‌ ಸವ್ರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಹಾಗೂ ಮಣಿಪುರ ಸರ್ಕಾರ ಈ ಹಿಂಸಾಚಾರವನ್ನ ನಿಯಂತ್ರಿಸೋಕೆ ಸಮರ್ಥವಾಗಿವೆ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply