ʻಹುಮನಾಯ್ಡ್‌ ರೊಬೋಟ್‌ಗಳು ನಿಮ್ಮನ್ನ ಹಿಂಬಾಲಿಸಬಹುದುʼ: ಎಲಾನ್‌ ಮಸ್ಕ್‌ ಜೊತೆ ರಿಷಿ ಸುನಕ್‌ ಮಾತುಕತೆ

masthmagaa.com:

ಮುಂದೊಂದು ದಿನ ರೋಬೋಗಳು ನಿಮ್ಮನ್ನ ಬೆನ್ನಟ್ಟಬಹುದು ಅಂತ X’ ಮುಖ್ಯಸ್ಥ ಎಲಾನ್‌ ಮಸ್ಕ್‌ ವಾರ್ನ್‌ ಮಾಡಿದ್ದಾರೆ. ಇಂಗ್ಲೆಂಡ್‌ನ ಬ್ಲೆಚ್ಲೆ ಪಾರ್ಕ್‌ನಲ್ಲಿ ನಡೆದ AI ಸುರಕ್ಷಾ ಶೃಂಗಸಭೆಯಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಮಸ್ಕ್‌ ಅವ್ರ ಇಂಟರ್‌ವ್ಯೂ ಮಾಡಿದ್ದಾರೆ. ಈ ವೇಳೆ ಮಾತಾಡಿರೋ ಮಸ್ಕ್‌, ಮುಂದೊಂದಿನ ಹುಮನಾಯ್ಡ್‌ ರೊಬೋಟ್‌ಗಳು ನಮ್ಮನ್ನ ಎಲ್ಲಿ ಬೇಕಾದ್ರೂ ಚೇಸ್‌ ಮಾಡಬಹುದು. ಇದ್ರ ಬಗ್ಗೆ ನಾವು ಎಚ್ಚರವಾಗಿರಬೇಕು. ಯಾಕಂದ್ರೆ ಅಂತಹ ರೋಬೋಗಳು ಮುಂದೊಂದು ದಿನ ಮನುಷ್ಯರಿಗೆ ಅನ್‌ಫ್ರೆಂಡ್ಲಿ ಆಗೋ ಹಾಗೆ ಸಾಫ್ಟ್‌ವೇರ್‌ ಅಪ್‌ಡೇಟ್‌ನ್ನಕೂಡ ಪಡೀಬಹುದು. ಹೀಗಾಗಿ ಇಂತಹ ರೊಬೋಟ್‌ಗಳಿಗೆ ಒಂದು ಫಿಸಿಕಲ್‌ ಸ್ವಿಚ್‌ ಆಫ್‌ ಬಟನ್‌ ಇರೋದು ಮುಖ್ಯವಾಗಿದೆ ಅಂತ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ, ಮುಂದಿನ ದಿನಗಳಲ್ಲಿ AIನ್ನ ಹೆಚ್ಚಾಗಿ ಬಳಸಿದ್ರೆ ಉದ್ಯೋಗದ ಅವಶ್ಯಕತೆ ಇಲ್ಲದಿರೋ ಟೈಮ್‌ ಕೂಡ ಬರಬಹುದು. ಕೇವಲ ಪರ್ಸನಲ್‌ ಸ್ಯಾಟಿಸ್‌ಫ್ಯಾಕ್ಷನ್‌ಗೋಸ್ಕರ ಉದ್ಯೋಗಗಳು ಇರ್ತವೆ ಅಷ್ಟೆ. ಆಗ ಯೂನಿವರ್ಸಲ್‌ ಬೇಸಿಕ್‌ ಇನ್‌ಕಂ ಬದ್ಲು, ಯೂನಿವರ್ಸಲ್‌ ಹೈ ಇನ್‌ಕಂನ ʻಸಮೃದ್ಧಿಯ ಯುಗʼ ಇರುತ್ತೆ ಅಂತ ಹೇಳಿದ್ದಾರೆ. ಜೊತೆಗೆ AI ಒಂಥರ, ನೀವು ಬಯಸಿದ್ದನೆಲ್ಲಾ ಕೊಡೋ ಜೀನಿ ಇದ್ದ ಹಾಗೆ ಆದ್ರೆ ಯಾವಾಗ್ಲೂ ಈ Fairy Tales ಎಲ್ಲಾ ಸುಖಾಂತ್ಯ ಕಾಣಲ್ಲ ಹಾಗಾಗಿ AI ಸುರಕ್ಷತೆ ಬಗ್ಗೆ ಎಲ್ಲ ದೇಶಗಳು ಕ್ರಮ ಕೈಗೊಳ್ಳಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply