ಇಥಿಯೋಪಿಯಾದಲ್ಲಿ ಹಸಿವಿನಿಂದ ಸಾವನ್ನಪ್ಪಿದ 700 ಮಂದಿ!

masthmagaa.com:

ಇತ್ತೀಚಿನ ದಿನಗಳಲ್ಲಿ ಉತ್ತರ ಇಥಿಯೋಪಿಯಾದ ಟಿಗ್ರೆ ಪ್ರಾಂತ್ಯದಲ್ಲಿ ಹಸಿವಿನಿಂದ ಕನಿಷ್ಠ 700 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಅಂತ ತಿಳಿದು ಬಂದಿದೆ. ವಿಶ್ವಸಂಸ್ಥೆ ಹಾಗೂ ಅಮೆರಿಕ ಆಹಾರ ಪೂರೈಕೆಯ ಸಹಾಯವನ್ನು ನಿಲ್ಲಿಸಿದ ಪರಿಣಾಮ ಸಾವುಗಳ ಸಂಖ್ಯೆ ಹೆಚ್ಚಾಗ್ತಿವೆ ಅಂತ ಅಲ್ಲಿನ ಅಧಿಕಾರಿಗಳು ಹಾಗೂ ಸಂಶೋಧಕರು ತಿಳಿಸಿದ್ದಾರೆ. ಇನ್ನು ಅಗತ್ಯವಿರೋ ಜನರಿಗೆ ನೀಡೋಕೆ ಉದ್ದೇಶಿಸಲಾಗಿದ್ದ ಗೋಧಿ ಕಳ್ಳತನ ಆಗಿರೋ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಹಾಗೂ ಅಮೆರಿಕ ಮಾರ್ಚ್‌ ತಿಂಗಳಿನಿಂದಲೇ ಟಿಗ್ರೆ ಪ್ರಾಂತ್ಯಕ್ಕೆ ಆಹಾರ ಪೂರೈಕೆ ಸಹಾಯವನ್ನು ಸ್ಥಗಿತಗೊಳಿಸಿವೆ. ಜೊತೆಗೆ ವಿಶ್ವಸಂಸ್ಥೆ ಹಾಗೂ ಅಮೆರಿಕದ ಈ ನಿರ್ಧಾರದಿಂದ ಸುಮಾರು 2 ಕೋಟಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ಮಾರ್ಚ್‌ನಲ್ಲಿ ಆಹಾರ ಸಹಾಯವನ್ನು ನಿಲ್ಲಿಸಿದ ಬಳಿಕ ಮೂರು ಪ್ರಾಂತ್ಯಗಳ 7 ವಲಯಗಳಲ್ಲಿ 728 ಮಂದಿ ಹಸಿವಿನ ಕಾರಣಕ್ಕೆ ಮೃತಪಟ್ಟಿದ್ದಾರೆ ಅಂತ ಟಿಗ್ರೆಯ ವಿಪತ್ತು ನಿರ್ವಹಣ ಆಯೋಗದ ಡೇಟಾ ಇಂದ ತಿಳಿದು ಬಂದಿದೆ. ಅಂದ್ಹಾಗೆ ಪರಿಸ್ಥಿತಿ ಭಯಾನಕವಾಗಿದ್ದು, ಆಹಾರದ ಅಭಾವದಿಂದ ಅಲ್ಲಿನ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ ಅಂತ ಅಲ್ಲಿನ ವಿಪತ್ತು ನಿರ್ವಹಣಾ ಆಯೋಗದ ಮುಖ್ಯಸ್ಥ ಗೆಬ್ರೆಹಿವೋಟ್‌ ಗೆಬ್ರೆಜಿಯಾಹರ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply