ಎಲಾನ್‌ ಮಸ್ಕ್‌ ವಿಶ್ವದ ಡಂಬೆಸ್ಟ್‌ ಸ್ಮಾರ್ಟ್‌ ವ್ಯಕ್ತಿ: ಬೈಡೆನ್‌ ಪುತ್ರ

masthmagaa.com:

ಟೆಸ್ಲಾ ಕಂಪನಿ ಮಾಲೀಕ ಎಲಾನ್‌ ಮಸ್ಕ್‌ ವಿಶ್ವದ ಡಂಬೆಸ್ಟ್‌ ಸ್ಮಾರ್ಟ್‌ ಅಂದ್ರೆ ಅತ್ಯಂತ ಪೆದ್ದ ಚಾಣಾಕ್ಷ ವ್ಯಕ್ತಿʼ ಅಂತ ಅಮೆರಿಕಾ ಅಧ್ಯಕ್ಷರ ಪುತ್ರ ಹಂಟರ್ ಬೈಡನ್ ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರೋ ಹಂಟರ್‌, ʻಸತತ ನನ್ನ ಮೇಲೆ ತಪ್ಪು ಮಾಹಿತಿಗಳಿಂದ ಆರೋಪ ಮಾಡೋ ಮಸ್ಕ್‌ ಅವರಿಗೆ ಪ್ರಜಾಪ್ರಭುತ್ವ ಹಾಗೂ ವಾಕ್‌ ಸ್ವಾತಂತ್ರ್ಯದ ಬಗ್ಗೆ ಅಗೌರವವಿದೆ ಅಂತ ಮಸ್ಕ್‌ ವಿರುದ್ದ ಕಿಡಿಕಾರಿದ್ದಾರೆ. ಇದಕ್ಕೆ ತಮ್ಮ ಎಕ್ಸ್‌ ಖಾತೆಯಲ್ಲಿ ರಿಯಾಕ್ಟ್‌ ಮಾಡಿರೋ ಮಸ್ಕ್‌, ನೀವ್‌ ಯಾವ ತಪ್ಪು ಮಾಹಿತಿ ಬಗ್ಗೆ ಮಾತನಾಡ್ತಿದೀರಿ ಅಂತ ಹಂಟರ್‌ಗೆ ಪ್ರಶ್ನೆ ಮಾಡಿದ್ದು, ನಿಮ್ಮ ಅನೇಕ ಕ್ರೈಂ ವಿಡೀಯೋಗಳಿಗಾಗಿ ನಿಮಗೆ ಸಿನಿಮಾಟೋಗ್ರಾಫಿ ಅವಾರ್ಡ್‌ ನೀಡ್ಬೇಕು ಅಂತ ಹಂಟರ್ ಬೈಡೆನ್‌ಗೆ ಟಾಂಗ್‌ ಕೊಟ್ಟಿದ್ದಾರೆ. ಅಂದ್ಹಾಗೆ‌ ಹಂಟರ್ ಬೈಡೆನ್‌ ವಿರುದ್ದ ಸತತ 17 ವರ್ಷಗಳಿಂದ 1.4 ಮಿಲಿಯನ್‌ ಡಾಲರ್‌ (11.6ಕೋಟಿ)ತೆರಿಗೆ ಕುರಿತ ಪ್ರಕರಣ ಯುಎಸ್‌ ಕೋರ್ಟ್‌ನಲ್ಲಿದೆ. ಮತ್ತೊಂದೆಡೆ 2019ರಲ್ಲಿ ಡೆವೆಲ್ಪರ್‌ನ ಅಂಗಡಿಯೊಂದರಲ್ಲಿ ತಮ್ಮ ಲ್ಯಾಪ್‌ಟಾಪ್‌ ಬಿಟ್ಟುಹೋಗಿದ್ದ ಹಂಟರ್‌ನ ವಿಡಿಯೋ ಕುರಿತು ಮಸ್ಕ್‌ ಅಪಹಾಸ್ಯ ಮಾಡಿದ್ದರು. ಹೀಗಾಗಿ ಇಬ್ಬರ ಮಧ್ಯೆ ಈ ಟಾಕ್ ವಾರ್ ಜೋರಾಗಿದೆ ಅಂತ ಹೇಳಲಾಗ್ತಿದೆ.

ಸ್ಯಾಂಡಿ ಹುಕ್‌ ಶಾಲೆಯ ವಂಚನೆಗೆ ಸಂಬಂಧಿಸಿದಂತೆ 2018ರಲ್ಲಿ ಬ್ಯಾನ್‌ ಮಾಡಲಾಗಿದ್ದ ಪಿತೂರಿವಾದಿ ಅಲೆಕ್ಸ್‌ ಜೋನ್ಸ್‌ ಅವರ ಎಕ್ಸ್‌ ಖಾತೆಯನ್ನ ಮಸ್ಕ್‌ ಮತ್ತೆ ಮರು ಸ್ಥಾಪಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಮಸ್ಕ್‌ ಮಾಹಿತಿ ಹಂಚಿಕೊಂಡಿದ್ದು, ವೋಟ್‌ ಸರ್ವೆ ಮೂಲಕ 70% ವೋಟರ್ಸ್‌ಗಳ ಅಪೇಕ್ಷೆ ಮೇರೆಗೆ ಈ ಎಕ್ಸ್‌ ಖಾತೆಗೆ ಮರು ಅವಕಾಶವನ್ನ ಕೊಡಲಾಗಿದೆ ಅಂತ ಮಸ್ಕ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply