ಮಗಳನ್ನ ನೆನದು ವಿಜಯ್‌ ಪತ್ನಿ ಭಾವುಕ ಪೋಸ್ಟ್‌ !

masthmagaa.com:

ತಮಿಳು ನಟ, ಸಂಗೀತ ನಿರ್ದೇಶಕ, ಗಾಯಕ, ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ ಕುಟುಂವದವರಿಗೆ ಭರಿಸಲಾಗದಷ್ಟು ನೋವನ್ನ ಕೊಟ್ಟಿದೆ. ವಿಜಯ್​ ಆಂಟೋನಿ ಪತ್ನಿ ಫಾತಿಮಾ ತಮ್ಮ ಮಗಳನನ್ನು ನೆನೆದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನ ಮಾಡಿದ್ದಾರೆ.

“ನೀನು ಕೇವಲ 16 ವರ್ಷ ಮಾತ್ರ ಬದುಕುತ್ತೀಯಾ ಅಂತ ನನಗೆ ಮೊದಲೇ ಗೊತ್ತಿದ್ರೆ, ನಾನು ನಿನ್ನನ್ನು ನನ್ನ ಹತ್ತಿರದಲ್ಲೇ ಇಟ್ಟುಕೊಳ್ತಿದ್ದೆ. ಸೂರ್ಯ, ಚಂದ್ರರಿಗೂ ನಿನ್ನನ್ನು ತೋರಿಸ್ತಿರಲಿಲ್ಲ. ನಾನು ನಿನ್ನ ಯೋಚನೆಯಲ್ಲೇ ಮುಳುಗಿ ಸಾಯ್ತಾ ಇದೀನಿ. ನಿನ್ನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಅಪ್ಪ-ಅಮ್ಮನ ಬಳಿ ಮರಳಿ ಬಾ. ಲವ್ ಯೂ ಚಿನ್ನ. ಲಾರಾ ನಿನಗಾಗಿ ಕಾಯ್ತಿದ್ದಾಳೆ.” ಅಂತ ಭಾವುಕರಾಗಿ ಪೋಸ್ಟ್‌ ಮಾಡಿದ್ದಾರೆ.

https://x.com/mrsvijayantony/status/1711319498631078336?s=20

ಈ ಪೋಸ್ಟ್‌ ನೋಡಿದ ಅಭಿಮಾನಿಗಳು ಸಮಾಧಾನಿಸುವ ಕಾಮೆಂಟ್‌ಗಳನ್ನ ಮಾಡಿ, ಧೈರ್ಯ ತುಂಬೋ ಕೆಲಸ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply