ಡೈಮಂಡ್‌ ಲೀಂಗ್‌ನಲ್ಲಿ ಮತ್ತೊಂದು ಗೋಲ್ಡ್‌ ಪದಕ ಗೆದ್ದ ಚಿನ್ನದ ಹುಡುಗ ನೀರಜ್‌ ಚೋಪ್ರಾ!

masthmagaa.com:

ಸ್ವಿಜರ್‌ಲೆಂಡ್‌ ಲಾಸೆನ್‌ನಲ್ಲಿ ನಡೆದ ಡೈಮಂಡ್ ಲೀಗ್‌ ಸ್ಪರ್ಧೆಯಲ್ಲಿ ಒಲಿಂಪಿಕ್‌ ಚಾಂಪಿಯನ್, ಜಾವೆಲಿನ್‌ ಥ್ರೋ ತಾರೆ ನೀರಜ್ ಚೋಪ್ರಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ 5ನೇ ಪ್ರಯತ್ನದಲ್ಲಿ 87.66 ಮೀಟರ್ ಜಾವೆಲಿನ್‌ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಡೈಮಂಡ್‌ ಲೀಗ್‌ ಗೆದ್ದ ಕೀರ್ತಿಗೆ ನೀರಜ್ ಭಾಜನರಾಗಿದ್ದಾರೆ. ಅಂದ್ಹಾಗೆ ಮೇ 5ರಂದು ಕತಾರ್‌ನ ದೋಹಾದಲ್ಲಿ ನಡೆದಿದ್ದ ಡೈಮಂಡ್‌ ಲೀಗ್‌ನಲ್ಲಿ 88.67 ಮೀಟರ್‌ ಜಾವೆಲಿನ್‌ ಥ್ರೋ ಮಾಡಿ ಟೂರ್ನಿಯಲ್ಲಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

-masthmagaa.com

Contact Us for Advertisement

Leave a Reply