7 ವರ್ಷದ ಹಿಂದೆ ಕಾಣೆಯಾಗಿದ್ದ IAF ವಿಮಾನದ ಅವಶೇಷ ಪತ್ತೆ!

masthmagaa.com:

ಇಂಡಿಯನ್‌ ಏರ್‌ಫೋರ್ಸ್‌ನ ಕಾಣೆಯಾಗಿದ್ದ ವಿಮಾನವೊಂದ್ರ ಅವಶೇಷಗಳು ಇದೀಗ ಚೆನ್ನೈ ಬಳಿ ಪ್ರತ್ಯೆಯಾಗಿವೆ. AN-32 ಅನ್ನೋ ವಿಮಾನ 2016ರ ಜುಲೈ 22 ರಂದು ಕಾಣೆಯಾಗಿತ್ತು. ಚೆನ್ನೈನಿಂದ ಅಂಡಮಾನ್‌ ನಿಕೋಬಾರ್‌ನ ಪೋರ್ಟ್‌ ಬ್ಲೈರ್‌ಗೆ ಹೋಗ್ತಿದ್ದ ಈ ವಿಮಾನದಲ್ಲಿ 29 ಜನರಿದ್ರು. ವಿಮಾನ ಟೇಕ್‌ ಆಫ್‌ ಆದ ಸ್ವಲ್ಪ ಹೊತ್ತಲ್ಲೇ ರೆಡಾರ್‌ನಿಂದ ಕಣ್ಮರೆಯಾಗಿತ್ತು. ಚೆನ್ನೈನಿಂದ 280 ಕಿಲೋ ಮೀಟರ್‌ ದೂರದಲ್ಲಿ ಈ ವಿಮಾನ ಕಾಣೆಯಾಗಿತ್ತು. ಆಗ ನಡೆದ ಸರ್ಚ್‌ ಆಪರೇಷನ್‌ ಇದುವರೆಗೆ ಭಾರತ ಸಮುದ್ರದಲ್ಲಿ ನಡೆಸಿರೋ ಅತಿ ಡೊಡ್ಡ ಕಾರ್ಯಾಚರಣೆ ಎನಿಸಿಕೊಂಡಿದೆ. ಆದ್ರೆ ಈಗ ಘಟನೆ ಆಗಿ 7 ವರ್ಷಗಳ ನಂತರ, ಅಚಾನಕ್‌ ಆಗಿ, ಅನಿರೀಕ್ಷಿತವಾಗಿ ಇದ್ರ ಅವಶೇಷಗಳು ನೇವಿ ಕಣ್ಣಿಗೆ ಬಿದ್ದಿವೆ. ಹೇಗಪ್ಪಾ ಅಂದ್ರೆ, ಚೆನ್ನೈ ಮೂಲದ ಇಂಡಿಯನ್‌ ಇನ್ಸ್ಟಿಟೂಟ್‌ ಆಫ್‌ ಓಷನ್‌ ಟೆಕ್ನಾಲಜಿ ಅನ್ನೋ ಸಂಸ್ಥೆ ನಾರ್ವೆ ಇಂದ ಒಂದು ಡಿವೈಸ್‌ ಇಂಪೋರ್ಟ್‌ ಮಾಡಿತ್ತು. ಈ ಡಿವೈಸ್‌, automatic underwater vehicle ಅಥ್ವಾ AUV, ಬಂಗಾಳ ಕೊಲ್ಲಿಯಲ್ಲಿ ಕೆಲವು ಟೆಸ್ಟ್‌ಗಳನ್ನ ಕೈಗೊಂಡಿತ್ತು. ಈ ವೇಳೆ ಸಮುದ್ರದ 3,400 ಮೀಟರ್‌ ಆಳದಲ್ಲಿ ಅಚಾನಕ್ಕಾಗಿ ವಿಮಾನದ ಅವಶೇಷಗಳನ್ನ ಈ ಡಿವೈಸ್‌ ಗುರುತಿಸಿದೆ. ನಂತರ ಈ ಅವಶೇಷಗಳು AN-32 ವಿಮಾನದ್ದು ಅಂತ ರಕ್ಷಣಾ ಸಚಿವಾಲಯ ಕನ್ಫರ್ಮ್‌ ಮಾಡಿದೆ. ವಿಮಾನ ಕ್ರಾಷ್‌ ಆಗಿದ್ದ ಸ್ಥಳದಲ್ಲಿ ಪರೀಕ್ಷೆ ನಡೆಸೋ ಇಂಟೆನ್ಶನ್‌ ಏನು ಇರ್ಲಿಲ್ಲ. ಆದ್ರೆ ಕೋಇನ್ಸಿಡೆನ್ಸ್‌ ಆಗಿ ಅವಶೇಷಗಳು ಪತ್ತೆಯಾಗಿವೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply