ICC ರೂಲ್ಸ್‌ನಲ್ಲಿ ದೊಡ್ಡ ಬದಲಾವಣೆ! ಇನ್ಮೇಲೆ ಹಿಂಗೆ ಮಾಡಿದ್ರೆ 5 ರನ್‌ ದಂಡ!

masthmagaa.com:

ಕ್ರಿಕೆಟ್‌ ಮ್ಯಾಚ್‌ಗಳು, ಅದ್ರಲ್ಲೂ ಲಿಮಿಟೆಡ್‌ ಓವರ್‌ನ ಪಂದ್ಯಗಳು ಡಿಲೇ ಆಗ್ತಿರೋದನ್ನ ಸೀರಿಯಸ್ಸಾಗಿ ತಗೊಂಡಿರೋ ICC ರೂಲ್ಸ್‌ಗಳಲ್ಲಿ ದೊಡ್ಡ ಬದಲಾವಣೆ ಮಾಡಿದೆ.ಇಷ್ಟು ದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ ತಂಡ ಆಟವನ್ನ ತಡ ಮಾಡಿದ್ರೆ ಹಣದ ರೂಪದಲ್ಲಿ ದಂಡ ಹಾಕ್ತಿತ್ತು. ಆದ್ರೆ ಈಗ ಐಸಿಸಿ ಬ್ಯಾಟಿಂಗ್‌ ತಂಡಗಳಿಗೆ ಎಕ್ಸ್‌ಟ್ರಾ ರನ್‌ ನೀಡೋಕೆ ಮುಂದಾಗಿದೆ. ಹೌದು ನೂತನ ನಿಯಮದ ಪ್ರಕಾರ ಬೌಲಿಂಗ್‌ ತಂಡ ಒಂದು ಓವರ್‌ ಮುಗಿದ 60 ಸೆಕೆಂಡಗಳ ಒಳಗೆ ಬೌಲ್‌ ಮಾಡದೇ ಹೋದ್ರೆ ಇನ್ಮೇಲೆ ಲೇಟ್‌ ಅಂತ ಪರಿಗಣಿಸಲಾಗುತ್ತೆ. ಒಂದು ಇನ್ನಿಂಗ್ಸ್‌ನಲ್ಲಿ 3 ಬಾರಿ ಹೀಗೆ ಬೌಲಿಂಗ್‌ಗೆ ತಡ ಮಾಡಿದ್ರೆ ಬ್ಯಾಟಿಂಗ್‌ ತಂಡಕ್ಕೆ 5ರನ್‌ ಉಚಿತವಾಗಿ ಕೊಡಲಾಗುವ ನಿಯಮ ಇದಾಗಿದೆ. ಮಂಗಳವಾರ ಅಹ್ಮದಾಬಾದ್‌ನಲ್ಲಿ ನಡೆದ ಐಸಿಸಿ ಮೀಟಿಂಗ್‌ನಲ್ಲಿ ಡಿಸೆಂಬರ್‌ನಿಂದ ಎಪ್ರಿಲ್‌ವರೆಗೆ ಈ ನಿಯಮವನ್ನ ಪ್ರಾಯೋಗಿಕವಾಗಿ ನಡೆಸಿ ಅದರ ಫಲಿತಾಂಶ ಆಧರಿಸಿ ಈ ರೂಲ್ಸ್‌ ಅನ್ವಯಿಸೋಕೆ ನಿರ್ಧಾರ ಮಾಡಲಾಗಿದೆ. ಇತ್ತೀಚಿಗೆ ಮ್ಯಾಚ್‌ಗಳ ಅವಧಿ ತಡವಾಗ್ತಿರೋ ಕಾರಣದಿಂದ ಈ ಬದಲಾವಣೆ ಮಾಡಲಾಗ್ತಿದೆ. ಇನ್ನು ಪಿಚ್‌ ಹಾಗೂ ಔಟ್‌ಫೀಲ್ಡ್‌ ಮಾನಿಟರಿಂಗ್‌ ನಿಯಮಗಳಲ್ಲೂ ಕೊಂಚ ಬದಲಾವಣೆ ಮಾಡಿದ್ದು ಆಯಾ ಸ್ಥಳದ ಡಿಮೆರೆಂಟ್‌ ಪಾಯಿಂಟ್‌ನ್ನು ಕಳೆದ 5 ವರ್ಷಗಳ ಮೇಲೆ ನಿರ್ಧಾರಿತವಾಗುತ್ತದೆ. ಕ್ರಿಕೆಟ್‌ನಲ್ಲಿ ಲಿಂಗದ ಕುರಿತು ಒಂದು ನಿಯಮ ತರಲಾಗಿದ್ದು, ವ್ಯಕ್ತಿ ತನ್ನ ಫ್ರೌಡಾವಸ್ಥೆಯಲ್ಲಿ ಹೊಂದಿದ ಮೂಲ ಲಿಂಗದಿಂದ ಮಾತ್ರ ಆ ವ್ಯಕ್ತಿ ಮಹಿಳಾ ಅಥವಾ ಪುರುಷರ ಕ್ರಿಕೆಟ್‌ ಆಡಲು ಅರ್ಹ ಅಂತ ಹೇಳಿದೆ. ಅಂದ್ರೆ ವ್ಯಕ್ತಿಯ ಮೂಲ ಲಿಂಗದ ನಂತರ ಬೇರೆ ಲಿಂಗವಾಗಿ ಸರ್ಜರಿ ಮಾಡಿಸಿಕೊಂಡವರಿಗೆ ಈ ರೂಲ್ಸ್‌ ಪ್ರಕಾರ ಕ್ರಿಕೆಟ್‌ಗೆ ಅರ್ಹತೆ ಇಲ್ಲವೆಂಬುದು ಸ್ಪಷ್ಟಪಡಿಸಲಾಗಿದೆ. ಇನ್ನೂ ಮಹಿಳಾ ಕ್ರಿಕೆಟಿಗರ ಸುರಕ್ಷತೆಗಾಗಿ ಈ ರೂಲ್ಸ್‌ ಜಾರಿಯಾಗಲಿದೆ ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply