ಚಾಂಪಿಯನ್ಸ್‌ ಟ್ರೋಫಿ ನಾವು ಆಯೋಜಿಸ್ತೀವಿ: ಐಸ್‌ಲ್ಯಾಂಡ್!

masthmagaa.com:

2025ರ ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯುತ್ತಾ. ದುಬೈನಲ್ಲಿ ನಡೆಯುತ್ತಾ ಅನ್ನೋ ಗೊಂದಲದ ನಡುವೆ ದೂರದ ಐಸ್‌ಲ್ಯಾಂಡ್‌ ದೇಶ ನಮ್ಗೂ ಒಂದು ಚಾನ್ಸ್‌ ಕೊಡ್ರಪ್ಪ ಅಂತೇಳಿ ಸರ್ಪೈಸ್‌ ಕೊಟ್ಟಿದೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಮಾಡಿರೊ ಐಸ್‌ಲ್ಯಾಂಡ್‌ ಕ್ರಿಕೆಟ್‌ ಡೈರೆಕ್ಟಾಗಿ ICC ಮುಖ್ಯಸ್ಥ ಗ್ರೆಗ್‌ ಬಾರ್ಕ್ಲೆ ಅವ್ರನ್ನ ಟ್ಯಾಗ್‌ ಮಾಡಿ, ಟೂರ್ನಿ ಆಯೋಜಿಸೋಕೆ ಬಿಡ್‌ ಮಾಡಲಾಗಿದೆ ಅಂತ ಪೋಸ್ಟ್‌ ಮಾಡಿದೆ. ಇದೇನಪ್ಪ ಐಸ್‌ಲ್ಯಾಂಡ್‌ಗೆ ಇಂತಹ ಇಂಟ್ರೆಸ್ಟ್‌ ಅಂತ ನೋಡಿದ್ರೆ ಕ್ರಿಕೆಟ್‌ ಸ್ಕೋಪೆ ಇಲ್ಲದ ಈ ದೇಶದಲ್ಲಿ ಅಂತರಾಷ್ಟ್ರೀಯ ಪಂದ್ಯ ಇರ್ಲೀ ದೇಶಿಯ ಕ್ರಿಕೆಟ್‌ ಆಡಿಸೋಕು ಸ್ಟೇಡಿಯಂಗಳಿಲ್ಲ ಅನ್ನೋದು ಗೊತ್ತಾಗಿದೆ. ಒಂದ್ಕಡೆ ಹಿಮದ ಬೆಟ್ಟಗಳು, ಇನ್ನೊಂದ್ಕಡೆ ಜೀವಂತ ಜ್ವಾಲಾಮುಖಿಗಳಿರೊ ಈ ದುರ್ಗಮ ಪ್ರದೇಶದಲ್ಲಿ ಕ್ರಿಕೆಟ್‌ ಬಗ್ಗೆ ಮಾತಾಡೋರು ಸಿಗೋದು ಕಷ್ಟ. ಅಂದ್ಹಾಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಕ್ರಿಕೆಟ್‌ ಐಸ್‌ಲ್ಯಾಂಡ್‌ ಅನ್ನೋ ʻಫೇಕ್‌ ಅಕೌಂಟ್‌ʼ ಒಂದು ಆಗಾಗ್ಗೆ ಇಂತಹ ಹಾಸ್ಯಾಸ್ಪದ ಪೋಸ್ಟ್‌ಗಳನ್ನ ಹಾಕತ್ತೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply