ಇಸ್ರೇಲ್‌ ವಿರುದ್ಧ ವರ್ಲ್ಡ್‌ ಕೋರ್ಟ್‌! ಹತ್ಯಾಕಾಂಡ ನಿಲ್ಲಿಸಲು ಆದೇಶ!

masthmagaa.com:

ಗಾಜಾ ಯುದ್ಧದಲ್ಲಿ ಇಸ್ರೇಲ್‌ ಪ್ಯಾಲೆಸ್ತೀನರ ಹತ್ಯಾಕಾಂಡ ಮಾಡ್ತಿದ್ದಾರೆ ಅಂತ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವರ್ಲ್ಡ್‌ ಕೋರ್ಟ್‌ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸ್ತಿದ್ದ ನೆದರ್‌ಲ್ಯಾಂಡ್ಸ್‌ನ ವರ್ಲ್ಡ್‌ ಕೋರ್ಟ್‌, ಇದೀಗ ತಕ್ಷಣವೇ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೀನರ ಹತ್ಯಾಕಾಂಡ ಆಗೋದನ್ನ ನಿಲ್ಲಿಸೋ ಬಗ್ಗೆ ಕ್ರಮ ತೆಗೆದುಕೊಳ್ಳೋಕೆ ಇಸ್ರೇಲ್‌ಗೆ ಆದೇಶಿಸಿದೆ. ಇದ್ರಿಂದ ಕದನ ವಿರಾಮ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಅತ್ತ ʻಗಾಜಾ ಕದನ ವಿರಾಮಕ್ಕೆ ವರ್ಲ್ಡ್‌ ಕೋರ್ಟ್‌ ಆದೇಶ ನೀಡಿದ್ರೆ ಅದಕ್ಕೆ ಹಮಾಸ್‌ ಬದ್ಧರಾಗಿರ್ತಾರೆʼ. ಹೀಗಂತ ಇದೀಗ ಹಮಾಸ್‌ ನಾಯಕ ಒಸಾಮಾ ಹಮ್ದಾನ್‌ ಪ್ರೆಸ್‌ ಕಾನ್ಫರೆನ್ಸ್‌ ಒಂದ್ರಲ್ಲಿ ಹೇಳ್ಕೊಂಡಿದ್ದಾರೆ. ಇನ್ನು ಈ ವರ್ಲ್ಡ್‌ ಕೋರ್ಟ್‌ ಆದೇಶದ ಬಗ್ಗೆ ಗಮನಿಸ್ಬೇಕಾದ ವಿಷಯವಂದ್ರೆ, ಈ ಹಿಂದೆ ಕೂಡ ರಷ್ಯಾ-ಯುಕ್ರೇನ್‌ ಯುದ್ಧ ನಿಲ್ಲಿಸ್ಬೇಕು ಅಂತ ಇದೇ ಕೋರ್ಟ್‌ ಆದೇಶಿಸಿತ್ತು. ಆದ್ರೆ ಈ ಬಗ್ಗೆ ಕ್ಯಾರೇ ಅನ್ನದ ಪುಟಿನ್‌ ಸೇನೆ ಈಗಲೂ ಯುಕ್ರೇನ್‌ ಜೊತೆ ಕಾದಾಡ್ತಲೇ ಇದೆ. ಇದೀಗ ಇಸ್ರೇಲ್‌ ವಿಚಾರದಲ್ಲೂ ಮುಂದೆ ಬಂದಿರೋ ವರ್ಲ್ಡ್‌ ಕೋರ್ಟ್‌ನ ಆದೇಶವನ್ನ ಇಸ್ರೇಲ್‌ ಕನ್ಸಿಡರ್‌ ಮಾಡುತ್ತಾ? ಅನ್ನೋ ಪ್ರಶ್ನೆ ಎದ್ದಿದೆ. ಇತ್ತ ಗಾಜಾದಲ್ಲಿ ಇಸ್ರೇಲ್‌ ಹಮಾಸ್‌ ವಿರುದ್ಧ ಯುದ್ಧ ತೀವ್ರಗೊಳಿಸ್ತಿದ್ಹಾಗೆ, ಅತ್ತ ಕೆಂಪು ಸಮುದ್ರದಲ್ಲಿ ಹೌತಿಗಳ ದಾಳಿ ಕೂಡ ಜೋರಾಗ್ಬಿಟ್ಟಿದೆ. ಹೌತಿಗಳು ಈಗ ಅಮೆರಿಕ ಯುದ್ಧನೌಕೆ ಮತ್ತು ಬ್ರಿಟನ್‌ನ ಆಯಿಲ್‌ ಟ್ಯಾಂಕರ್‌ ಮೇಲೆ ದಾಳಿ ನಡೆಸಿದೆ. ಈ ದಾಳಿ ಏಡೆನ್‌ ಕೊಲ್ಲಿಯಲ್ಲಿ ನಡೆದಿದ್ದು, ಅಗ್ನಿ ಅವಘಡ ಕೂಡ ಸಂಭವಿಸಿದೆ.

-masthmagaa.com

Contact Us for Advertisement

Leave a Reply