ICMR ಕೇಸ್: 80 ಕೋಟಿ ಜನರ ಡೇಟಾ ಕದ್ದಿದ್ದ ಖದೀಮರು ಅರೆಸ್ಟ್!‌

masthmagaa.com:

‌ಸರ್ಕಾರಿ ವೆಬ್‌ಸೈಟ್‌ ಹ್ಯಾಕ್‌ ಮಾಡಿ 81 ಕೋಟಿ ಜನರ ಆಧಾರ್‌ ಹಾಗೂ ಪಾಸ್‌ಪೋರ್ಟ್‌ ದಾಖಲೆ ಕದ್ದ ಕೇಸ್‌ನಲ್ಲಿ ನಾಲ್ಕು ಮಂದಿಯನ್ನ ಬಂಧಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ Indian Council of Medical Research (ICMR) ವೆಬ್‌ಸೈಟ್‌ ಹ್ಯಾಕ್‌ ಆಗಿದ್ದ ವಿಚಾರ ಬೆಳಕಿಗೆ ಬಂದು ಭಾರಿ ಸದ್ದು ಮಾಡಿತ್ತು. ದೆಹಲಿ ಪೊಲೀಸರು ಈ ಬಗ್ಗೆ ಸ್ವಯಂಕೃತ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ರು. ಈಗ ಒಡಿಸ್ಸಾ ಮೂಲದ ಒಬ್ಬ ಇಂಜಿನಿಯರ್‌, ಇಬ್ಬರು ಹರ್ಯಾಣ ಮೂಲದ ಸ್ಕೂಲ್‌ ಡ್ರಾಪ್‌ ಔಟ್‌ ಯುವಕರು, ಒಬ್ಬ UP ಮೂಲದ ವ್ಯಕ್ತಿಯನ್ನ ದೆಹಲಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಖದೀಮರು ಬರೀ ICMR ದಾಖಲೆ ಅಲ್ಲ, ಅಮೆರಿಕ ತನಿಖಾ ಸಂಸ್ಥೆ FBI, ಪಾಕಿಸ್ತಾನದ ಕಂಪ್ಯೂಟರೈಸ್ಡ್‌ ನ್ಯಾಷನಲ್‌ ಐಡೆಂಟಿಟಿ ಕಾರ್ಡ್(‌CNIC)… ಭಾರತದ ಆಧಾರ್‌ ಕಾರ್ಡ್‌ ಕಾಪಿ ಇದು… ಇವುಗಳ ವೆಬ್‌ಸೈಟ್‌ಗಳನ್ನೂ ಹ್ಯಾಕ್‌ ಮಾಡಿ ದಾಖಲೆ ಕದ್ದಿದ್ದಾಗಿ ಬಾಯ್ಬಿಟ್ಟಿದ್ದಾರೆ. ಮೂರು ವರ್ಷಗಳ ಹಿಂದೆ ಇವರೆಲ್ಲಾ ಗೇಮಿಂಗ್‌ ಪ್ಲಾಟ್‌ಫಾರ್ಮ್‌ ಒಂದ್ರಲ್ಲಿ ಪರಿಚಯ ಆಗಿ ಫ್ರೆಂಡ್ಸಾಗಿದ್ದಾರೆ. ಆಮೇಲೆ ದುಡ್ಡು ಮಾಡೋಕೆ ಅಂತ ಈ ದಾರಿ ಹಿಡಿದಿದ್ದಾಗಿ ಹೇಳಿಕೊಂಡಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸುತ್ತಿದ್ದಾರೆ. Indian Computer Emergency Response Team (CERT-In) ದೆಹಲಿ ಪೊಲೀಸರಿಗೆ ತನಿಖೆಯಲ್ಲಿ ಸಹಕಾರ ನೀಡಿದೆ.

-masthmagaa.com

Contact Us for Advertisement

Leave a Reply