ಸಂಸತ್‌ ದಾಳಿಕೋರರ ಬಳಿ ಇತ್ತು ಪ್ಲಾನ್-‌B! ಏನೀ ಪ್ಲಾನ್?

masthmagaa.com:

ಪಾರ್ಲಿಮೆಂಟ್ ದಾಳಿ ಕೇಸ್‌ಗೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಮಹೇಶ್‌ ಹಾಗೂ ಕೈಲಾಶ್‌ ಅನ್ನೋರು ಅರೆಸ್ಟ್‌ ಆಗಿದ್ದಾರೆ.‌ ಇಬರಿಬ್ರು ಸೋಷಿಯಲ್‌ ಮೀಡಿಯಾದ ʻಜಸ್ಟೀಸ್‌ ಫಾರ್‌ ಆಜಾದ್‌ ಭಗತ್‌ ಸಿಂಗ್‌ʼ ಗ್ರೂಪ್‌ನಲ್ಲಿದ್ರು ಅಂತೇಳಲಾಗ್ತಿದೆ. ಅಲ್ದೆ ಮುಖ್ಯ ಆರೋಪಿ ಲಲಿತ್‌ ಝಾ, ಸಂಸತ್ತಿನ ಒಳಗೆ ನುಗ್ಗೋಕೆ ಸಾಧ್ಯ ಆಗ್ದೇ ಇದ್ರೆ ಫ್ಲಾನ್-Bಯನ್ನ ಇಂಪ್ಲಿಮೆಂಟ್‌ ಮಾಡೋ ಉದ್ಧೇಶ ಇತ್ತು ಅಂದಿದ್ದಾನೆ. ಒಂದು ವೇಳೆ ಆರೋಪಿಗಳಾದ ನೀಲಮ್‌ ಹಾಗೂ ಅಮೋಲ್‌ ಸಂಸತ್ತಿಗೆ ರೀಚ್‌ ಆಗೋಕೆ ಆಗಿಲ್ಲ ಅಂದ್ರೆ, ಬೇರೆ ಮಾರ್ಗದಿಂದ ಸಂಸತ್ತಿನ ಇನ್ನೊಂದು ದಿಕ್ಕಿನ ಗೇಟ್‌ ಬಳಿ ಬಣ್ಣದ ಸ್ಪೋಟಕವನ್ನ ಬಳಸೋಕೆ ಯೋಜಿಸಿದ್ವಿ.. ಅಲ್ಲದೇ ಮಾಧ್ಯಮಗಳ ಕ್ಯಾಮರಾ ಮುಂದೆ ಘೋಷಣೆಗಳನ್ನ ಕೂಗೋಕೆ ಪ್ಲಾನ್‌ ಮಾಡಲಾಗಿತ್ತು ಅಂತ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ಅಂದ್ಹಾಗೆ ಈ ಮಹೇಶ್‌ ಹಾಗೂ ಕೈಲಾಶ್‌ ದೆಹಲಿಯ ಕರ್ತವ್ಯ ಪಥದ ಪೊಲೀಸ್‌ ಠಾಣೆಗೆ ಬಂದು ಸರಂಡರ್‌ ಆಗಿದ್ರು.

ಇನ್ನು ಡಿಸೆಂಬರ್‌ 14 ರಂದು ಪೊಲೀಸ್‌ಗೆ ಸರೆಂಡರ್‌ ಆಗಿರೋ 5ನೇ ಆರೋಪಿ ಲಲಿತ್‌ ಜಾ, ಪಾರ್ಲಿಮೆಂಟ್‌ ಕೋಲಾಹಲದ ಮಾಸ್ಟರ್‌ಮೈಂಡ್‌ ಅಂತ ಹೇಳಲಾಗ್ತಿದೆ. ಈ ಗುಂಪಿಗೆ ಇವನೇ ಲೀಡರ್‌ ಹಾಗೂ ಪಾರ್ಲಿಮೆಂಟ್‌ಗೆ ನುಗ್ಗೋ ಪ್ಲಾನ್‌ ಡಿಸೈನ್‌ ಮಾಡಿದ್ದು ಕೂಡ ಇವನೇ ಅಂತ ಆತನೇ ಒಪ್ಪಿಕೊಂಡಿದ್ದಾನೆ. ಇನ್ನು ಪಾರ್ಲಿಮೆಂಟ್‌ ಘಟನೆ ಆಗೋಕು ಮುಂಚೆ 4 ಆರೋಪಿಗಳು ತಮ್ಮ ಮೊಬೈಲ್‌ ಫೋನ್‌ಗಳನ್ನ ಲಲಿತ್‌ ಜಾ ಕೈಗೆ ಕೊಟ್ಟು ಹೋಗಿದ್ರು. ಈ ಘಟನೆಯಿಂದ ಮುಂದೆಲ್ಲಾದ್ರೂ ಅರೆಸ್ಟ್‌ ಆಗಿ ತನಿಖೆ ನಡೆಸೋ ವೇಳೆ ಪೊಲೀಸ್‌ ಕೈಗೆ ಮೊಬೈಲ್‌ ಸಿಗಬಾರ್ದು ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ರು ಅಂತ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply