ಸಾವರ್ಕರ್‌ ಪೋಟೋ ವಿವಾದ: ಪೋಟೋ ತೆರವಿಗೆ ಪ್ರಿಯಾಂಕ್‌ ಖರ್ಗೆ ಆಗ್ರಹ!

masthmagaa.com:

ವಿಧಾನಸಭೆಯಲ್ಲಿ ಹಾಕಿರೋ ಸ್ವಾತಂತ್ಯ ಹೋರಾಟಗಾರ ವಿ.ಡಿ.ಸಾವರ್ಕರ್‌ ಪೋಟೋವನ್ನ ತೆಗೆದರೆ ಸೂಕ್ತ. ನನಗೆ ಬಿಟ್ಟರೆ ಇವತ್ತೇ ತೆರವು ಮಾಡ್ತೇನೆ ಅಂತ ಗ್ರಾಮಿಣಾಭಿವೃದ್ದಿ ಸಚಿವ ಪ್ರಿಯಾಂಕ್‌ ಖರ್ಗೆ ಗುಡುಗಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ಗುರುವಾರ ಮಾತನಾಡಿರೋ ಖರ್ಗೆ, ಯಾವ ತತ್ವ ಸಿದ್ದಾಂತದಲ್ಲಿ ಸಮಾನತೆ‌ ಇಲ್ಲವೋ, ಸ್ವಾಭಿಮಾನದ ಬದುಕಿಲ್ಲವೋ‌ ಅದನ್ನು ನಾನು ಒಪ್ಪಲ್ಲ.‌ ಗಾಂಧಿ ಹತ್ಯೆಗೆ ಪ್ರೇರಣೆಯಾದ ತತ್ವವನ್ನು ನಾನು ಒಪ್ಪಲ್ಲ, ಆ ತತ್ವವನ್ನು ಹುಟ್ಟು ಹಾಕಿದವರನ್ನು ಏಕೆ ನಂಬಬೇಕು? ನನಗೆ ಬಸವ ತತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಇದೆ ಎಂದರು. ಸಾವರ್ಕರ್ ಪೋಟೋ ತೆಗೆಯೋ ಬಗ್ಗೆ ನಿಯಮಾನುಸಾರ ಮಾಡಬೇಕು. ಅದು ನಮ್ಮ ಕೈಯಲ್ಲಿ ಇಲ್ಲ. ಸ್ಪೀಕರ್‌ ಕ್ರಮ ಕೈಗೊಳ್ಳುತ್ತಾರೆ ಅಂತ ಖರ್ಗೆ ಹೇಳಿದ್ದಾರೆ. ಇನ್ನು ವಿಧಾನಸಭೆಯಲ್ಲಿ ನೆಹರೂ ಫೋಟೋ ಹಾಕಬೇಕು. ಅವರು 3 ಸಾವಿರ ದಿನ ಜೈಲಿನಲ್ಲಿ ಕಳೆದು, ದೇಶವನ್ನು ಆಳಿ ವೈಜ್ಞಾನಿಕ ಮನೋಭಾವ ಬೆಳೆಸಿದ್ದಾರೆ. ಸಾವರ್ಕರ್ ಇತಿಹಾಸ ಅಶ್ವತ್ಥ ನಾರಾಯಣಗಿಂತ ಚೆನ್ನಾಗಿ ನನಗೆ ಗೊತ್ತಿದೆ ಅಂತ ಸಚಿವ ಖರ್ಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply