ಹಿಮಾಲಯದಲ್ಲಿ ಸಮುದ್ರ ಪತ್ತೆ?

masthmagaa.com:

ಪ್ರವಾಸಿಗರಿಗೆ ಆಕರ್ಷಣೆ ಕೇಂದ್ರವಾಗಿರೋ ಹಿಮಾಲಯ ಪರ್ವತ ವಿಜ್ಞಾನಿಗಳ ಪಾಲಿಗೆ ತೆರೆದ ಪ್ರಯೋಗ ಶಾಲೆ ಕೂಡ ಹೌದು. ಎಷ್ಟೇ ಸಂಶೋಧನೆಗಳು ಆದ್ರೂ ಹಿಮಾಲಯ ಕುರಿತ ರಹಸ್ಯ ದಿನಕ್ಕೊಂದು ಬೆಳಕಿಗೆ ಬರ್ತಾನೇ ಇರ್ತವೆ. ಇದೀಗ ಹಿಮಾಲಯದಲ್ಲಿ ಈ ಹಿಂದೆ ಸಮುದ್ರ ಇತ್ತು ಅನ್ನೋದನ್ನ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ (IISC) ಮತ್ತು ಜಪಾನ್‌ನ ನಿಗಟಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಹಿಮಾಲಯದ ಖನಿಜಗಳ ನಡುವೆ ಇರುವ ನೀರಿನ ಹನಿಗಳನ್ನ ಪತ್ತೆ ಮಾಡಿರುವ ವಿಜ್ಞಾನಿಗಳು, ಸುಮಾರು 60 ಕೋಟಿ ವರ್ಷಗಳ ಹಿಂದೆ ಇಲ್ಲಿ ಪುರಾತನ ಸಮುದ್ರ ಇತ್ತು ಅಂತ ಕಂಡುಕೊಂಡಿದ್ದಾರೆ. ಇನ್ನು ಪುರಾತನ ಕಾಲದಲ್ಲಿ ಹಿಮಾಲಯದಲ್ಲಿ ಸಮುದ್ರ ಇದ್ದಿರೋ ಸಾಧ್ಯೆತೆ ಬಗ್ಗೆ ನಮಗೆ ಪೂರಕವಾದ ಐತಿಹಾಸಿಕ ಪುರಾವೆಗಳು ದೊರಕಿವೆ ವಿಜ್ಞಾನಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply