ಬೆಳ್ಳಂದೂರು ಕೆರೆ ನೊರೆಗೆ ಗೊತ್ತಾದ ಕಾರಣ! ಏನದು?

masthmagaa.com:

ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ 2015ರಲ್ಲಿ ಕಾಣಿಸಿಕೊಂಡ ನೊರೆಗೆ ಕಾರಣವನ್ನ IISC ಪತ್ತೆ ಹಚ್ಚಿದೆ. 4 ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ಇದೀಗ ಸಂಶೋಧಕರು ಇದರ ವಿಚಾರವಾಗಿ ಮೂರು ಕಾರಣಗಳನ್ನ ತಿಳಿಸಿದ್ದಾರೆ. ಅತಿಯಾದ ಮಳೆ, ಕೆರೆಗೆ ಸೇರುವ ಸಂಸ್ಕರಿಸದ ಕೊಳಚೆ ನೀರು ಹಾಗೂ ನಿರ್ದಿಷ್ಠ ಬ್ಯಾಕ್ಟೀರಿಯಾವನ್ನ ಹೊಂದಿರುವ ಘನವಸ್ತುಗಳು ಕಾರಣ ಅಂತ IISC ಸಂಶೋಧಕರು ಹೇಳಿದ್ದಾರೆ. ಅಂದ್ಹಾಗೆ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ 2015ರಲ್ಲಿ ಕಾಣಿಸಿಕೊಂಡ ನೊರೆ ಮತ್ತು ಬೆಂಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ನಂತರ ಅದರ ಹಿಂದಿನ ಕಾರಣ ಏನು ಅನ್ನೊದನ್ನ ಪತ್ತೆ ಹಚ್ಚಲು IISC ಸಂಶೋಧನೆ ನಡೆಸೋಕೆ ಸ್ಟಾರ್ಟ್‌ ಮಾಡಿತ್ತು. ಇದೀಗ ಕಾರಣವನ್ನ ತಿಳಿಸಿದೆ.

-masthmagaa.com

Contact Us for Advertisement

Leave a Reply