ಪಾಕಿಸ್ತಾನದಿಂದ ಮತ್ತೊಮ್ಮೆ IMF ಮೊರೆ! ಸಾಲಕ್ಕಾಗಿ ಪಾಕ್‌ ಪರದಾಟ!

masthmagaa.com:

ಸಾಲ ಕೊಡೋಕೆ ಮನಸೇ ಇಲ್ಲದ IMF ನ್ನ ಪಾಕಿಸ್ತಾನ ಸಧ್ಯಕ್ಕೆ ಬಿಡೋ ತರ ಕಾಣಿಸ್ತಾ ಇಲ್ಲ. ಈಗ ಬನ್ನಿ ಇನ್ನೊಂದ್ಸಲ ಮಾತಾಡಣ ಅಂತ ಪಾಕ್‌ ಐಎಮ್‌ಎಫ್‌ ಅನ್ನ ಮಾತುಕತೆಗೆ ಕರೆದಿದೆ. ಇತ್ತೀಚೆಗೆ ಪಾಕ್‌ ಸರ್ಕಾರದ ಮನವಿ ಮೇರೆಗೆ IMF ಅಧಿಕಾರಿಗಳು ಪಾಕಿಸ್ತಾನಕ್ಕೆ 10 ದಿನಗಳ ಪ್ರವಾಸ ಕೈಗೊಂಡಿದ್ರು. ಈ ಅವಧಿಯಲ್ಲಿ 2 ಸುತ್ತಿನ ಮಾತುಕತೆಗಳನ್ನೂ ನಡೆಸಲಾಗಿತ್ತು. ಆದ್ರೆ ಐಎಮ್‌ಎಫ್‌ ಪಾಕ್‌ಗೆ ಸಾಲ ಕೊಡೋಕೆ ಹಲವಾರು ಕಠಿಣ ಷರತ್ತುಗಳನ್ನ ಹಾಕಿತ್ತು. ಈ ಎಲ್ಲಾ ಷರತ್ತುಗಳನ್ನ ಪಾಕ್‌ ಒಪ್ಪಿ ಕೂಡ ಆಗಿತ್ತು. ಇಷ್ಟದ್ರೂ ದುಡ್ಡು ಕೊಡೋಕೆ ಐಎಂಎಫ್‌ ಒಪ್ಪಿರಲಿಲ್ಲ. ಆದ್ರೆ ಪಾಕಿಸ್ತಾನ ಸುಮ್ನೇ ಇರಬೇಕಲ್ಲ. ಮತ್ತೆ ಮಾತಾಡೋಣ ಬನ್ನಿ ಅಂತ ಪಾಕಿಸ್ತಾನ ಕರೆದಿದೆ. ನಾವು ಐಎಂಎಫ್‌ ಅವರನ್ನ ಇನ್ನೊಂದ್ಸಲ ಮಾತಡೋಕೆ ಕರೀತಾ ಇದ್ದೀವಿ ಅಂತ ಪಾಕ್‌ನ ಉನ್ನತ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಒಣಗಿ ಹೆಣವಾಗ್ತಿರೋ ಪಾಕಿಸ್ತಾನ ಯಾರೋಬ್ರೂ ಕೂಡ ಹೆಲ್ಪ್‌ ಮಾಡ್ತಿಲ್ಲ. ಯುರೋಪ್‌ ಹಾಗೂ ಗಲ್ಫ್‌ ದೇಶಗಳು ಒಂದಷ್ಟು ಹೆಲ್ಫ್‌ ಮಾಡಿದ್ರು ಪಾಕಿಸ್ತಾನಕ್ಕೆ ಅದು ಏನಕ್ಕೂ ಸಾಕಾಗ್ತಿಲ್ಲ. 23 ಕೋಟಿ ಜನಸಂಖ್ಯೆ ಇರುವ ಪಾಕಿಸ್ತಾನದಲ್ಲಿ ಕೇವಲ 3 ಬಿಲಿಯನ್‌ ಡಾಲರ್ ವಿದೇಶಿ ವಿನಿಮಯ‌ ಮಾತ್ರ ಇದೆ. ಅದೂ ಕೂಡ ಕರಗ್ತಾ ಇದೆ. ಹಣದುಬ್ಬರ ಬೆಲೆ ಏರಿಕೆ ರಾಕೆಟ್‌ ವೇಗದಲ್ಲಿ ಏರಿಕೆಯಾಗ್ತಿದೆ. ಹೀಗಾಗಿ ಏನಾದ್ರೂ ಮಾಡಿ IMFನಿಂದ ಸಾಲ ಪಡೆದು ದಿವಾಳಿಯಾಗೋದನ್ನ ತಪ್ಪಿಸಿಕೊಳ್ಳಬೇಕು ಅಂತಿರೋ ಪಾಕ್‌ ಐಎಂಎಫ್‌ ಮುಂದೆ ಮತ್ತೆ ಮಂಡಿಯೂರಿದೆ.

-masthmagaa.com

Contact Us for Advertisement

Leave a Reply