ಪಾಕಿಸ್ತಾನಕ್ಕೆ 9,130 ಕೋಟಿ ರೂ. ಸಾಲ ನೀಡೊಕೆ ಸಮ್ಮತಿಸಿದ IMF!

masthmagaa.com:

ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡ್ತಿರೊ ಪಾಕಿಸ್ತಾನಕ್ಕೆ ಇದೀಗ 1.1 ಬಿಲಿಯನ್‌ ಡಾಲರ್‌ ಅಂದ್ರೆ 9,130 ಕೋಟಿ ರೂಪಾಯಿ ಸಾಲ ನೀಡೊಕೆ IMF ಸಮ್ಮತಿ ನೀಡಿದೆ. ಪಾಕ್‌ನೊಂದಿಗಿನ ಒಟ್ಟು 3 ಬಿಲಿಯನ್‌ ಅಂದ್ರೆ 24,900 ಕೋಟಿ ರೂಪಾಯಿ ಸಾಲದ 3ನೇ ಹಾಗೂ ಅಂತಿಮ ಕಂತಿನ ಭಾಗವಾಗಿ ತಕ್ಷಣವೇ ಈ ಸಾಲ ನೀಡೊಕೆ IMF ಒಪ್ಕೊಂಡಿದೆ. ಇನ್ನು ಈ ವಿಚಾರವಾಗಿ ರಿಯಾಕ್ಟ್‌ ಮಾಡಿರೊ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌, ಇದು ನಮ್ಮ ದೇಶದ ಆರ್ಥಿಕತೆಯ ಸ್ಥಿರತೆಯನ್ನ ಹೆಚ್ಚಿಸುತ್ತದೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply