ಆರ್ಥಿಕ ಬೆಳವಣಿಗೆಯಲ್ಲಿ ಚೀನಾವನ್ನೇ ಹಿಂದಿಕ್ಕಿದ ಭಾರತ: IMF ವರದಿ

masthmagaa.com:

ಭಾರತದ ಆರ್ಥಿಕತೆ 2023-24ರಲ್ಲಿ ಈ ಹಿಂದೆ ಅಂದಾಜು ಮಾಡಿದಕ್ಕಿಂತಲೂ ವೇಗವಾಗಿ ಬೆಳವಣಿಗೆಯಾಗಲಿದೆ ಅಂತ IMF ಹೇಳಿದೆ. IMF ತನ್ನ ಇತ್ತೀಚಿನ World Economic Outlook (WEO) ಜಿಡಿಪಿ ಔಟ್‌ಲುಕ್‌ ರಿಲೀಸ್‌ ಮಾಡಿದೆ. ಈ ವರದಿಯಲ್ಲಿ 2023-24ರಲ್ಲಿ ಭಾರತದ ಜಿಡಿಪಿ 6.3% ದಾಖಲಾಗುವ ಸಾಧ್ಯತೆಯಿದೆ ಅಂತ ಅಂದಾಜಿಸಲಾಗಿದೆ. ಅಂದ್ಹಾಗೆ 2023-24ರಲ್ಲಿ ಭಾರತದ ಆರ್ಥಿಕತೆ ಶೇ 6.1ರಷ್ಟು ಬೆಳವಣಿಗೆ ಕಾಣಲಿದೆ ಅಂತ ಜುಲೈನಲ್ಲಿ ಐಎಂಎಫ್ ಅಂದಾಜು ಮಾಡಿತ್ತು. ಇನ್ನು IMF ಈಗ ಮಾಡಿರುವ ಅಂದಾಜು RBI ಈತ್ತೀಚೆಗೆ ಮಾಡಿರುವ ಜಿಡಿಪಿ ದರ ಶೇಕಡ 6.5 ಅಂದಾಜಿಗಿಂತಲೂ ಕಡಿಮೆ ಇದೆ. ಹೀಗಿದ್ದರೂ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆ ಆಗಿರುವ ಚೀನಾದ ಜಿಡಿಪಿ ಬೆಳವಣಿಗೆಗಿಂತಲೂ ಹೆಚ್ಚಿಗೆ ಇರಲಿದೆ ಅಂತ ತಿಳಿಸಿದೆ. ಚೀನಾದ ಆರ್ಥಿಕತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5ರಷ್ಟು ಬೆಳವಣಿಗೆ ಕಾಣಲಿದೆ ಅಂತ IMF ಹೇಳಿದೆ.

-masthmagaa.com

Contact Us for Advertisement

Leave a Reply