ಪಾಕ್‌ಗೆ 5,810 ಕೋಟಿ ಸಾಲ ನೀಡೋಕೆ ನಿರ್ಧರಿಸಿದ ಐಎಮ್‌ಎಫ್‌!

masthmagaa.com

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರೋ ಪಕ್ಕದ ಪಾಕಿಸ್ತಾಕ್ಕೆ IMF ಕಡೆಯಿಂದ ಗುಡ್‌ ನ್ಯೂಸ್‌ ಸಿಕ್ಕಿದೆ. ಪಾಕಿಸ್ತಾನಕ್ಕೆ ನೀಡಲು ಒಪ್ಪಿಕೊಂಡಿದ್ದ ಸಾಲದಲ್ಲಿ ಉಳಿದಿದ್ದ 700 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 5,810 ಕೋಟಿ ರೂಪಾಯಿ ನೀಡೋದಕ್ಕೆ ಐಎಮ್‌ಎಫ್‌ ನಿರ್ಧಾರ ಮಾಡಿದೆ. ಈ ಬೇಲೌಟ್‌ ರಿಲೀಸ್‌ಗೆ ಸಂಬಂಧಿಸಿದಂತೆ ಫೈನಲೈಜ್‌ ಮಾಡಲಾಗಿದೆ ಅಂತ IMF ತಿಳಿಸಿದೆ. ಪಾಕಿಸ್ತಾನಕ್ಕೆ ಜುಲೈನಲ್ಲಿ 3 ಬಿಲಿಯನ್‌ ಅಂದ್ರೆ 24,900 ಕೋಟಿ ರೂಪಾಯಿ ನೀಡೋಕೆ IMF ಒಪ್ಪಿಗೆ ಸೂಚಿಸಿತ್ತು. ಅಂದ್ಹಾಗೆ ಮೊದಲನೇ ಭಾಗವಾಗಿ IMF 1.2 ಬಿಲಿಯನ್‌ ಡಾಲರ್‌ ಅಂದ್ರೆ 9,960 ಕೋಟಿ ರೂಪಾಯಿ ನೀಡಿತ್ತು. ಈಗ ಉಳಿದ ಹಣವನ್ನ ನೀಡಲು IMF ಅಸ್ತು ಎಂದಿದೆ. ಇದ್ರಿಂದ ಆರ್ಥಿಕ ಬಿಕ್ಕಟ್ಟಿನಲ್ಲಿರೋ ಪಾಕಿಸ್ತಾನಕ್ಕೆ ಸ್ವಲ್ಪ ರಿಲೀಫ್‌ ಸಿಕ್ಕಾ ಹಾಗೆ ಆಗಿದೆ.

-masthmagaa.com

Contact Us for Advertisement

Leave a Reply