ಕರ್ನಾಟಕ ರತ್ನ ʻಅಪ್ಪುʼ ಅವರ ಜೀವನ ಕಥೆ ಬೆಂಗಳೂರು ವಿವಿ ಪಠ್ಯ ಪುಸ್ತಕದಲ್ಲಿ!

masthmagaa.com:

ಕರ್ನಾಟಕ ರತ್ನ , ಚಂದನವನದ ʻಅಪ್ಪುʼ ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜ್‌ ಕುಮಾರ್‌ ಅವ್ರ ಜೀವನದ ಒಂದು ಭಾಗ ಪಠ್ಯವಾಗಿ ರೂಪುಗೊಳ್ತಿದೆ. ಬೆಂಗಳೂರು ವಿವಿ ತನ್ನ ಬಿಕಾಂ ಪದವಿ ಮೂರನೇ ಸೆಮಿಸ್ಟರ್‌ ಕನ್ನಡ ಭಾಷಾ ಪುಸ್ತಕದಲ್ಲಿ ಪುನೀತ್‌ ಪಾಠವನ್ನ ಅಳವಡಿಸಿಕೊಂಡಿದೆ. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನ ಹೊರ ತಂದಿರೋ ʻನೀನೆ ರಾಜಕುಮಾರʼ ಕೃತಿಯ ‘ಲೋಹಿತ್ ಎಂಬ ಮರಿಮುದ್ದು’ ಅನ್ನೋ ಒಂದು ಅಧ್ಯಾಯವನ್ನ ‘ವಾಣಿಜ್ಯ ಕನ್ನಡ 3’ ಪುಸ್ತಕದಲ್ಲಿ ಅಳವಡಿಸಲಾಗಿದೆ. ಅಂದ್ಹಾಗೆ ಇತ್ತೀಚೆಗಷ್ಟೇ ‘ನೀನೇ ರಾಜಕುಮಾರ’ ಪುಸ್ತಕದ ನಾಲ್ಕನೇ ಆವೃತ್ತಿಯನ್ನ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ರು. ಈ ವರ್ಷದಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾದ ಬಯೋಗ್ರಫಿ ಅನ್ನೊ ದಾಖಲೆಗೂ ಈ ಪುಸ್ತಕ ಪಾತ್ರವಾಗಿತ್ತು. ಸತತವಾಗಿ ಹಲವು ಪುಸ್ತಕ ಮಳಿಗೆಗಳಲ್ಲಿ ಮತ್ತು ಆನ್ ಲೈನ್​ನಲ್ಲಿ ಟಾಪ್ ಪಟ್ಟಿಯಲ್ಲಿತ್ತು. ಇದೀಗ ಕೃತಿಯ ಭಾಗವನ್ನ ಪಠ್ಯಕ್ಕೂ ಅಳವಡಿಸಿಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply