ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಲಿ: NCSC ಆಯೋಗ!

masthmagaa.com:

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ(NCSC) ಇದೀಗ ಬಂಗಾಳಕ್ಕೆ ಭೇಟಿ ಕೊಟ್ಟಿದೆ. ಈ ವೇಳೆ NCSC ಮುಖ್ಯಸ್ಥ ಅರುಣ್‌ ಹಾಲ್ಡರ್, ಇಲ್ಲಿ ಕ್ರಿಮಿನಲ್‌ಗಳು ಸರ್ಕಾರದ ಜೊತೆ ಸೇರ್ಕೊಂಡಿದ್ದಾರೆ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡ್ಬೇಕು ಅಂತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿ ಸಲ್ಲಿಸಿದ್ದಾರೆ. ಅಲ್ದೇ ಈ ವಿಚಾರವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಯಾವುದೇ ಸಹಾಯ ಮಾಡಲಿಲ್ಲ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಈ ಪ್ರಕರಣ ಸಂಬಂಧ ಷಹಜಹಾನ್‌ ಶೇಖ್‌ ಮತ್ತವರ ಸಹಚರರನ್ನ ಅರೆಸ್ಟ್‌ ಮಾಡ್ಬೇಕು ಅಂತ ಬಿಜೆಪಿ ಮಮತಾ ಸರ್ಕಾರಕ್ಕೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ಮಾಡಿತ್ತು. ಅಲ್ದೇ ಭಾರಿ ಪ್ರತಿಭಟನೆ ವೇಳೆ ಅಶಾಂತಿ ಉಂಟಾದ ಪರಿಣಾಮ 144 ಸೆಕ್ಷನ್‌ ಜಾರಿಯಾಗಿತ್ತು. ಈ ವೇಳೆ ಪ್ರತಿಭಟನೆಯಲ್ಲಿ ಅನೇಕ ಜನ ಗಾಯಗೊಂಡಿದ್ರು.

-masthmagaa.com

Contact Us for Advertisement

Leave a Reply