ಅಧಿಕಾರ ಉಳಿಸಿಕೊಳ್ಳೋಕೆ ಸೇನೆ ಬಳಿ ಇಮ್ರಾನ್‌ ಖಾನ್‌ ಭಿಕ್ಷೆ ಬೇಡಿದ್ರು : ನವಾಜ್‌ ಪುತ್ರಿ ಆರೋಪ

masthmagaa.com:

ಇಮ್ರಾನ್‌ ಖಾನ್‌ ತನ್ನ ಸರ್ಕಾರ ಉಳಿಸಿಕೊಳ್ಳೊಕೆ ಸೇನೆಯ ಬಳಿ ಕೊನೇ ನಿಮಿಷದವರೆಗೂ ಭಿಕ್ಷೆ ಬೇಡ್ತಿದ್ರು ಅಂತ ನವಾಜ್‌ ಷರೀಫ್‌ ಪುತ್ರಿ ಮರ್ಯಮ್‌ ನವಾಜ್‌ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಆಡಳಿತವನ್ನ ಸೇನೆ ಕೂಡ ಕಂಟ್ರೋಲ್‌ ಮಾಡುತ್ತೆ ಅನ್ನೋದನ್ನ ಸ್ವತಃ ಅವರೂ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ಇಮ್ರಾನ್‌ ಖಾನ್‌ ಅಧಿಕಾರ ಕಳೆದುಕೊಳ್ಳೋ ಭಯದಲ್ಲಿ ಹತಾಶರಾಗಿದ್ರು. ಅಲ್ದೇ ಅಧಿಕಾರ ಉಳಿಸಿಕೊಡಿ ಅಂತ ಅಲ್ಲಿನ ಸೇನೆಯ ಬಳಿ ಕಡೇ ನಿಮಿಷದವರೆಗೂ ಭಿಕ್ಷೆ ಬೇಡ್ತಿದ್ರು. ನಂತರ PPP ಪಕ್ಷದ ಚೇರ್‌ಮನ್‌ ಆಸೀಫ್‌ ಅಲಿ ಜರ್ದಾರಿ ಹತ್ರ ಕೂಡ ಸರ್ಕಾರ ಉಳಿಸಿಕೊಳ್ಳೋದಕ್ಕೆ ಬೆಂಬಲ ಕೊಡಿ ಅಂತ ಮನವಿ ಮಾಡಿದ್ರು ಅಂತ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply