ಚುನಾವಣೆಗೆ ನಾಮಿನೇಷನ್‌ ಸಲ್ಲಿಸಿದ ಇಮ್ರಾನ್‌ ಖಾನ್:‌ ಮುಂದೇನು?

masthmagaa.com:

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬರುವ ಫೆಬ್ರವರಿ 8ರ ಸಾರ್ವತ್ರಿಕ ಚುನಾವಣೆಗೆ ನಾಮಿನೇಷನ್‌ ಸಲ್ಲಿಸಿದ್ದಾರೆ. ಖಾನ್‌ ಜೈಲಲ್ಲಿರೋ ಕಾರಣ PTI ಪಕ್ಷದ ನಾಯಕ ಉಮರ್‌ ಬೊದ್ಲಾ ಪಂಜಾಬ್‌ ಪ್ರಾಂತ್ಯದ ಮಿಯಾನ್‌ವಲಿಯಲ್ಲಿ ನಾಮಿನೇಷನ್‌ ಸಲ್ಲಿಸಿದ್ದಾರೆ. ತೋಷಾಖಾನ ಕೇಸ್‌ನಲ್ಲಿ ಬಂಧಿಯಾಗಿದ್ದ ಇಮ್ರಾನ್‌ ಖಾನ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜಿಲ್ಲಾ ನ್ಯಾಯಾಲಯವೊಂದು ಅನರ್ಹಗೊಳಿಸಿತ್ತು. ಆದ್ರೆ ಇದೀಗ ಪಾಕ್‌ ಸುಪ್ರೀಂ ಕೋರ್ಟ್‌ ದೇಶದ ರಹಸ್ಯ ಸೋರಿಕೆ ಕೇಸ್‌ನಲ್ಲಿ ಇಮ್ರಾನ್‌ ಖಾನ್‌ಗೆ ಬೇಲ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಖಾನ್‌ ನಾಮಿನೇಶನ್‌ ಸಲ್ಲಿಸಿದ್ದಾರೆ. ಆದ್ರೆ ಮತ್ತೆರಡು ಕೇಸ್‌ಗಳಲ್ಲಿ ಖಾನ್‌ ಮೇಲೆ ಅರೆಸ್ಟ್‌ ವಾರೆಂಟ್‌ ಇರೋದ್ರಿಂದ ಅವ್ರನ್ನ ಜೈಲಿನಿಂದ ರಿಲೀಸ್‌ ಮಾಡಿಲ್ಲ. ಆದ್ರೆ ಇಮ್ರಾನ್‌ ಖಾನ್‌ ಚುನಾವಣೆಗೆ ನಿಲ್ಲೋಕೆ ಪಾಕ್‌ ಸುಪ್ರೀಂ ಕೋರ್ಟ್‌ ಅನುವು ಮಾಡಿಕೊಟ್ಟು, ಖಾನ್‌ಗೆ ಬಿಗ್‌ ರಿಲೀಫ್‌ ನೀಡಿದೆ. ಖಾನ್‌ರ PTI ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪಾಕ್‌ ಅಟಾರ್ನಿ ಜನರಲ್‌ ಮನ್ಸೂರ್‌ ಉಸ್ಮಾನ್‌ ಅವಾನ್‌ರನ್ನ ಕೋರ್ಟ್‌ ತರಾಟೆಗೆ ತಗೊಂಡಿದೆ. ಇಮ್ರಾನ್‌ ಖಾನ್‌ ಚುನಾವಣೆಗೆ ನಿಲ್ಲೋ ವಿಚಾರವಾಗಿ PTI ಪಕ್ಷ ಪಾಕ್‌ ಚುನಾವಣಾ ಆಯೋಗದ ಬಳಿ ಕಂಪ್ಲೈಂಟ್‌ ನೀಡೋಕೆ ಕೋರ್ಟ್‌ ದಾರಿ ಮಾಡಿಕೊಟ್ಟು, ಇಮ್ರಾನ್‌ ಖಾನ್‌ಗೆ ವರದಾನ ನೀಡಿದೆ.

-masthmagaa.com

Contact Us for Advertisement

Leave a Reply