ಪಾಕ್ ಸೇನೆ ನನ್ನನ್ನ ಹತ್ಯೆ ಮಾಡೊದೊಂದೆ ಬಾಕಿ: ಇಮ್ರಾನ್‌ ಖಾನ್!

masthmagaa.com:

ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಇದೀಗ ಪಾಕ್‌ ಸೇನೆ ವಿರುದ್ದ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನೂರಾರು ಕೇಸ್‌ಗಳಿಂದ ಜೈಲಿನಲ್ಲಿರೊ ಇಮ್ರಾನ್‌, ಪಾಕ್‌ ಸೇನೆ ನನಗೆ ಏನೆಲ್ಲಾ ತೊಂದರೆ ಕೊಡೋಕೆ ಸಾಧ್ಯವಿದೆಯೋ… ಅವೆನ್ನೆಲ್ಲಾ ಮಾಡಿದೆ. ಇನ್ನು ನನ್ನನ್ನ ಹತ್ಯೆ ಮಾಡೊದೊಂದೇ ಬಾಕಿ ಉಳಿದಿದೆ. ನನಗೆ ಹಾಗೂ ನನ್ನ ಪತ್ನಿಗೆ ಏನಾದ್ರೂ ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥರೇ ಕಾರಣ. ನಾನು ಗುಲಾಮಗಿರಿಗಿಂತ ಸಾವಿಗೆ ಆದ್ಯತೆ ನೀಡ್ತೇನೆ. ಹೀಗಾಗಿ ನನಗೆ ಹೆದರಿಕೆ ಇಲ್ಲʼ ಅಂತ ಇಮ್ರಾನ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply