ಪಾಕಿಸ್ತಾನದಲ್ಲಿ ಚುನಾವಣೆ ನಡೆಯುತ್ತೆ ಅನ್ನೋದಕ್ಕೆ ಗ್ಯಾರಂಟಿ ಕೊಡ್ತೀರಾ ಅಂತ IMFನ ಪ್ರಶ್ನಿಸಿದ ಇಮ್ರಾನ್‌ ಖಾನ್‌!

masthmagaa.com:

ತೀವ್ರ ಆಂತರಿಕ ಬಿಕ್ಕಟ್ಟಿನಲ್ಲಿ ಬೇಯ್ತಾ ಇರೋ ಪಾಕ್‌ನಲ್ಲಿ, ಟೈಂಗೆ ಸರಿಯಾಗಿ ಎಲೆಕ್ಷನ್‌ ನಡೆಸುವಂತೆ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ IMF ಬಳಿ ಗ್ಯಾರಂಟಿ ಕೇಳಿದ್ದಾರೆ. ಆರ್ಥಿಕ ಮುಗ್ಗಟ್ಟಿನಲ್ಲಿ ದಿವಾಳಿಯಾಗದಂತೆ ತಡೆಯೋಕೆ ಪಾಕ್‌ IMF ಬಳಿ ಬೇಲ್‌ಔಟ್‌ ಪ್ಯಾಕೇಜ್‌ನ್ನ ಕೇಳಿತ್ತು. ಈ ಸಂಬಂಧ IMF, ಹೋದ ತಿಂಗಳು ಪಾಕ್‌ ಜೊತೆ ʻಸ್ಟ್ಯಾಂಡ್‌ ಬೈ ಅರೇಂಜ್‌ಮೆಂಟ್‌ʼ ಅಂತ ಒಂದು ಒಪ್ಪಂದ ಮಾಡ್ಕೊಂಡು 3 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 24.6 ಸಾವಿರ ಕೋಟಿ ರುಪಾಯಿಗಳ ಬೇಲ್‌ಔಟ್‌ ಪ್ಯಾಕೇಜ್‌ ನೀಡೋದಾಗಿ ಹೇಳಿತ್ತು. ‍ಆದ್ರೆ ಇದನ್ನ ಜುಲೈ 12 ಅಂದ್ರೆ ನಾಳಿದ್ದು IMFನ ಎಕ್ಸಿಕ್ಯೂಟಿವ್‌ ಬೋರ್ಡ್‌ ಸಭೆ ನಡೆಸಿ ಫೈನಲ್‌ ಮಾಡ್ಬೇಕು. ಇದ್ರ ಬೆನ್ನಲ್ಲೇ ʻಸ್ಟ್ಯಾಂಡ್‌ ಬೈ ಅಗ್ರೀಮೆಂಟ್‌ʼನ ನಿಲುವುಗಳನ್ನ ಜಾರಿಗೆ ತರೋ ಬಗ್ಗೆ ಭರವಸೆ ಮತ್ತು ಬೆಂಬಲ ಕೇಳೋದಕ್ಕೆ IMF ನಿಯೋಗ ಎಲ್ಲ ರಾಜಕೀಯ ಪಕ್ಷಗಳನ್ನ ಮೀಟ್‌ ಮಾಡ್ತಿದೆ. ಈ ರೀತಿ ಇಮ್ರಾನ್‌ ಖಾನ್‌ರನ್ನ ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ವೇಳೆ ಇಮ್ರಾನ್‌, ಅಕ್ಟೋಬರ್‌ನಲ್ಲಿ ನಿಗದಿಯಾಗಿರುವಂತೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಅಂತ ನೀವು ಗ್ಯಾರಂಟಿ ಕೊಡ್ತೀರಾ ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ IMF ಯಾವುದೇ ದೇಶದ ಆಂತರಿಕ ವಿಚಾರಗಳಲ್ಲಿ ನಾವು ಹಸ್ತಕ್ಷೇಪ ಮಾಡೋಕೆ ಆಗಲ್ಲ. ಆದರೆ ಸರಿಯಾದ ಟೈಮ್‌ನಲ್ಲಿ ಅಧಿಕಾರ ಬದಲಾವಣೆ ಹಾಗೂ ಇತರ ವಿಚಾರಗಳನ್ನ ಗಮನದಲ್ಲಿ ಇಟ್ಕೊಂಡು ಸಾಲದ ಪ್ಯಾಕೇಜ್‌ನ್ನ ನೀಡಲಾಗುತ್ತೆ ಅಂತ ತಿಳಿಸಿದ್ದಾರೆ. ಇನ್ನೊಂದ್‌ ಕಡೆ 2018ರ ಸಾರ್ವತ್ರಿಕ ಚುನಾವಣೆ ಟೈಮ್‌ನಲ್ಲಿ ಯಾವುದೇ ಹೊಸ ಎಕ್ಸಪರಿಮೆಂಟ್‌ ಮಾಡದಂತೆ ಪಾಕಿಸ್ತಾನಕ್ಕೆ ಚೀನಾ ವಾರ್ನ್‌ ಮಾಡಿತ್ತು ಅಂತ ಪಾಕಿಸ್ತಾನ ಹೇಳಿದೆ. ಚೀನಾ ಹಾಗೂ ಪಾಕಿಸ್ತಾನ ಎಕನಾಮಿಕ್‌ ಕಾರಿಡಾರ್‌ಗೆ ತೊಂದ್ರೆಯಾಗೋ ರೀತಿ ಯಾವುದೇ ನಿರ್ಧಾರ ಕೈಗೊಳ್ಬೇಡಿ ಅಂತ ಚೀನಾ ಹೇಳಿತ್ತು.

-masthmagaa.com

Contact Us for Advertisement

Leave a Reply