ಇಮ್ರಾನ್‌ಗೆ 10 ವರ್ಷ ಜೈಲು! ಪಾಕ್‌ ರಾಜಕೀಯದಲ್ಲಿ ಕೋಲಾಹಲ!

masthmagaa.com:

ಪಾಕಿಸ್ತಾನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಅಲ್ಲಿನ ಪಾಪುಲರ್‌ ಪ್ರೈಮ್‌ಮಿನಿಸ್ಟರ್‌ ಅಂತ ಕರೆಸಿಕೊಂಡಿದ್ದ ಇಮ್ರಾನ್‌ ಖಾನ್‌ಗೆ 10 ವರ್ಷ ಜೈಲು ವಿಧಿಸಲಾಗಿದೆ. ಸೈಫರ್‌ ಕೇಸ್‌ ಅಂದ್ರೆ ದೇಶದ ರಹಸ್ಯಗಳನ್ನ ಲೀಕ್‌ ಮಾಡಿದ ಕೇಸಲ್ಲಿ ಪಾಕ್‌ನ ಸ್ಪೆಷಲ್‌ ಕೋರ್ಟ್‌ ಖಾನ್‌ಗೆ ಈ ಶಿಕ್ಷೆ ವಿಧಿಸಿದೆ. ಇಮ್ರಾನ್‌ ಜೊತೆಗೆ ಇಮ್ರಾನ್‌ ಅವರ ಖಾಸಾ ಶಿಷ್ಯ, PTI ಪಕ್ಷದ ಉಪಾಧ್ಯಕ್ಷರೂ ಆಗಿರೋ ಶಾ ಮಹಮೂದ್‌ ಖುರೇಷಿಗೂ ಇದೇ ಕೇಸ್‌ನಲ್ಲಿ 10 ವರ್ಷ ಶಿಕ್ಷೆ ಆಗಿದೆ. ಅಂದ್ಹಾಗೆ ಇಮ್ರಾನ್‌ ಅವ್ರ ಪ್ರಧಾನಿ ಅವಧಿಯಲ್ಲಿ ಪಾಕ್‌ನ ಸೂಕ್ಷ್ಮ ದಾಖಲೆಗಳು ಲೀಕ್ ಆಗಿರೋ ಆರೋಪದ ಮೇಲೆ, ಇಮ್ರಾನ್‌ ಖಾನ್‌ ಮತ್ತು ಶಾ ಮಹಮೂದ್‌ ಖುರೇಷಿ ವಿರುದ್ಧ 10 ಮಂದಿ ದೂರು ಕೊಟ್ಟಿದ್ರಂತೆ. ನಂತ್ರ ಪಾಕಿಸ್ತಾನದ ಫೆಡೆರಲ್‌ ಇನ್ವೆಸ್ಟಿಗೇಷನ್‌ ಏಜೆನ್ಸಿ (FIA) ಇವ್ರಿಬ್ರ ವಿರುದ್ಧ ಕೇಸ್‌ ದಾಖಲಿಸಿತ್ತು. ಈ ವಾದ ವಿವಾದ ವಿಚಾರಣೆ ಎಲ್ಲಾ ನಡೆದು ಈಗ ಕೊನೆಗೂ ಇಮ್ರಾನ್‌ಖಾನ್‌ಗೆ 10 ವರ್ಷ ಜೈಲು ವಿಧಿಸಲಾಗಿದೆ. ಹಾಗಂತ ಈಗ ತಗೊಂಡೋಗಿ ಜೈಲಿಗೆ ಹಾಕ್ತಾರಾ…ಇಲ್ಲ. ಯಾಕಂದ್ರೆ ಅವರು ಆಲ್ರೆಡಿ ಜೈಲಲ್ಲಿದ್ದಾರೆ. ಒಂದಲ್ಲ ಎರಡಲ್ಲ 100 ಕ್ಕೂ ಅಧಿಕ ಕೇಸಲ್ಲಿ ಇಮ್ರಾನ್‌ ವಿರುದ್ದ ವ್ಯಾಜ್ಯಗಳು ನಡೀತಿವೆ. ಪ್ರಧಾನಿ ಟೈಮಲ್ಲಿ ಗಿಫ್ಟ್‌ಗಳನ್ನ ಮಾರಿದ್ರು ಅಂತ, ಮಹಿಳೆಗೆ ಅವಮಾನ ಮಾಡಿದ್ರು ಅಂತ‌, ದಂಗೆ ಏಳ್ಸೋಕೆ ಪ್ರಯತ್ನ ಮಾಡಿದ್ರು ಅಂತ ಅವರ ಮೇಲೆ ಸಾಕಷ್ಟು ಕೇಸ್ ತಗಲಾಕಿದ್ದಾರೆ. ಆ ಪೈಕಿ ಈಗ ದೇಶದ ಸೂಕ್ಷ್ಮ ಮಾಹಿತಿಗಳನ್ನ ಲೀಕ್‌ ಮಾಡಿದ್ರು ಅನ್ನೋ ಕೇಸಲ್ಲಿ 10 ವರ್ಷ ಜೈಲು ಆಗಿದೆ. ಈ ಮೂಲಕ ಪಾಕಿಸ್ತಾನದಲ್ಲಿ ನಾನೇ ಬಾಸ್‌ ಅನ್ನೋದನ್ನ ಪಾಕ್‌ ಸೇನೆ ಪ್ರೂವ್‌ ಮಾಡಿದೆ. ಯಾಕಂದ್ರೆ ಪಾಕಿಸ್ತಾನದಲ್ಲಿ ಇದೇ ಫೆಬ್ರವರಿ 8ಕ್ಕೆ ಎಲೆಕ್ಷನ್‌ ಇದೆ. ಈ ಬಾರಿ ನವಾಜ್‌ ಷರೀಫ್‌ ಮೇಲೆ ಪಾಕ್‌ ಸೇನೆಗೆ ಪ್ಯಾರ್‌ ಶುರುವಾಗಿದೆ. ಬಹತೇಕ ಮುಂದಿನ ಪ್ರಧಾನಿ ಅವರನ್ನೇ ಮಾಡೋಕೆ ಸಿದ್ದತೆ ನಡೀತಿದೆ. ಹೀಗಾಗಿ ನವಾಜ್‌ ಷರೀಫ್‌ಗೆ ಜೈಲಲ್ಲಿದ್ರೂ ತೊಂದ್ರೆ ಕೊಡ್ತಿರೋ ಇಮ್ರಾನ್‌ಖಾನ್‌ರನ್ನ ಮಟ್ಟ ಹಾಕೋಕೆ ಪಾಕ್‌ ಸೇನೆಯ ಆದೇಶದ ಮೇರೆಗೆ ಕೋರ್ಟ್‌ ಈ ಶಿಕ್ಷೆ ನೀಡಿರೋ ಥರ ಕಾಣ್ತಾ ಇದೆ. ಹಾಗ್‌ ನೋಡಿದ್ರೆ ಈ ಇಮ್ರಾನ್‌ ಖಾನ್‌ ಕೂಡ ಸೇನೆ ಕೃಪೆಯಿಂದಲೇ ಅಧಿಕಾರ ಹಿಡಿದಿದ್ರು. ಬಟ್‌ ಪ್ರಧಾನಿ ಸೀಟಲ್ಲಿ ಕೂತಿದ್ದೇ ತಡ ಇಮ್ರಾನ್‌ ಖಾನ್‌ ತಲೆ ನಿಲ್ಲಲಿಲ್ಲ. ʻಸ್ವತಂತ್ರ ಪಿಎಂʼ ಆಗೋ ಕನಸು ಕಂಡ್ರು. ಆ ಒಂದೇ ಒಂದು ಕನಸು ಈಗ ಇಮ್ರಾನ್‌ ಬದುಕನ್ನ ಬರ್ಬಾದ್‌ ಮಾಡ್ತಾ ಇದೆ. ಸಧ್ಯಕ್ಕೀಗ ಇಮ್ರಾನ್‌ ಖಾನ್‌ ಹೆಚ್ಚುವರಿಯಾಗಿ 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಮೇಲ್ಮನವಿ ಸಲ್ಲಿಸೋಕೆ ಅವಕಾಶ ಇದ್ರೂ ಅದರಿಂದ ಯಾವುದೇ ಪ್ರಯೋಜನೆ ಆಗೋ ರೀತಿ ಕಾಣ್ತಾ ಇಲ್ಲ. ಯಾಕಂದ್ರೆ ಸೇನೆ ಬಿಡಲ್ಲ. ಇದು ಪಾಕ್‌ನಲ್ಲಿ ಮುಂದಿನ ದಿನಗಳ ಬಗ್ಗೆ ಆತಂಕ ಹುಟ್ಟೋಕೆ ಕಾರಣವಾಗಿದೆ. ಯಾಕಂದ್ರೆ ನಿನ್ನೆಯಷ್ಟೇ ಇಮ್ರಾನ್‌ರನ್ನ ಆಚೆ ಬಿಡಿ ಅಂತ ಅವರ ಬೆಂಬಲಿಗರು ಬೀದಿಗಿಳಿದಿದ್ರು. ಅವರ ಮೇಲೆ ಪಾಕ್‌ ಸೇನೆ ಅಶ್ರುವಾಯು ಸಿಡಿಸಿತ್ತು. ಈಗ ಈ 10 ವರ್ಷದ ಶಿಕ್ಷೆ ಆದೇಶ ಬಂದಿದೆ. ಮೊದಲೇ ಅವರು ʻಇಮ್ರಾನ್‌ ಅಭಿಮಾನಿಗಳುʼ! ಬೀದಿಗಿಳಿದ್ರೆ ಹಿಂಸಾಚಾರ ಕಟ್ಟಿಟ್ಟ ಬುತ್ತಿ.ಕಾರಣವಾಗಿದೆ.

-masthmagaa.com

Contact Us for Advertisement

Leave a Reply