ರಿಲೀಸ್‌ ಆದ ಬೆನ್ನಲ್ಲೇ ಮತ್ತೆ ಅರೆಸ್ಟ್‌ ಆದ ಇಮ್ರಾನ್‌ ಖಾನ್‌ರ PTI ಪಕ್ಷದ ನಾಯಕರು!

masthmagaa.com:

ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷದ ವೈಸ್‌ ಚೇರ್‌ಮ್ಯಾನ್ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಕುರೇಶಿ ಅವ್ರನ್ನ ರಾವಲ್ಪಿಂಡಿ ಜೈಲಿನಿಂದ ರಿಲೀಸ್‌ ಆಗ್ತಿದ್ದಂತೆ ಮತ್ತೆ ಅರೆಸ್ಟ್‌ ಮಾಡಲಾಗಿದೆ. ಇವರ ಜೊತೆ ಪಿಟಿಐ ಪಕ್ಷದ ನಾಯಕಿ ಮುಸ್ರತ್‌ ಜಮ್ಶೆದ್‌ ಕೀಮಾ ಕೂಡ ರಿಲೀಸ್‌ ಆದ ಕೆಲವೇ ಕ್ಷಣಗಳಲ್ಲಿ ಮತ್ತೆ ಅರೆಸ್ಟ್‌ ಆಗಿದ್ದಾರೆ. ಅಂದ್ಹಾಗೆ ಇಮ್ರಾನ್‌ ಖಾನ್‌ ಅರೆಸ್ಟ್‌ ಬೆನ್ನಲ್ಲೇ ಉಂಟಾದ ಗಲಭೆ ಹಾಗೂ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಇವರನ್ನ ಅರೆಸ್ಟ್‌ ಮಾಡಲಾಗಿತ್ತು. ಇನ್ನೊಂದ್‌ ಕಡೆ ಇಮ್ರಾನ್‌ ಖಾನ್‌ ಹಾಗೂ ಅವರ ಪಿಟಿಐ ಪಕ್ಷದ ನಾಯಕರನ್ನ ಹತ್ತಿಕ್ಕಲು ಪಾಕ್‌ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ತಿದೆ. ಇದರ ಹಿನ್ನೆಲೆ ಪಿಟಿಐನ ಹಿರಿಯ ನಾಯಕಿ ಹಾಗೂ ಪಕ್ಷದ ಉಪಾಧ್ಯಕ್ಷೆ ಶಿರೀನ್‌ ಮಜಾರಿ, ಪಿಟಿಐ ಹಾಗೂ ರಾಜಕೀಯವನ್ನ ತೊರೆಯುವುದಾಗಿ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply