ಸೈಬರ್‌ ಕ್ರೈಂನಲ್ಲಿ ಬೆಂಗಳೂರು ಟಾಪ್!‌

masthmagaa.com:

ಈ ವರ್ಷ ಸೈಬರ್‌ ಪ್ರಕರಣಗಳ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಅಂತ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ (CID) ನೀಡಿರೋ ವರದಿ ಒಂದ್ರಿಂದ ತಿಳಿದಿದೆ. ಬೆಂಗಳೂರಿನಲ್ಲಿ ಕಳೆದ 11 ತಿಂಗಳಲ್ಲಿ 16 ಸಾವಿರ ಪ್ರಕರಣಗಳು ದಾಖಲಾಗಿವೆ. ಅಂದ್ರೆ ಪ್ರತಿದಿನ ಕನಿಷ್ಠ 35 ರಿಂದ 40 ಪ್ರಕರಣಗಳು ವರದಿಯಾಗ್ತಿವೆ. ಅವುಗಳಲ್ಲಿ ಹೆಚ್ಚಿನವು ʻಫೀಶಿಂಗ್ʼ ಅಂದ್ರೆ ಲಿಂಕ್‌ಗಳನ್ನು ಕಳಿಸಿ ಡೇಟಾ ಕದಿಯೋದು, OTP ವಂಚನೆಗಳು, ಸುಲಿಗೆಗೆ ಸಂಬಂಧಿಸಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವಾರ್ಷಿಕ ವರದಿ ಬೆನ್ನಲ್ಲೇ CID ಈ ವರದಿ ರಿಲೀಸ್‌ ಮಾಡಿದೆ. ಈ ಬಗ್ಗೆ CID ವಿಶೇಷ ಘಟಕದ ಪೊಲೀಸ್‌ ಮಹಾನಿರ್ದೇಶಕ ಡಾ. ಎಂಎ ಸಲೀಂ ಮಾತನಾಡಿ, ʻಪೊಲೀಸರ ಗಮನಕ್ಕೆ ಬರೋ ಎಲ್ಲಾ ಪ್ರಕರಣಗಳನ್ನ ತೆಗೆದುಕೊಳ್ತೇವೆ. ಬೆಂಗಳೂರಿನಲ್ಲಿ 8 ಸೈಬರ್‌ ಕ್ರೈಂ ಠಾಣೆಗಳಿವೆ. ಬೇರೆ ಠಾಣೆಗಳಲ್ಲೂ ಪ್ರಕರಣ ದಾಖಲಿಸಿಕೊಳ್ತೇವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗೋಕೆ, ಹೆಚ್ಚು ಠಾಣೆಗಳಿರೋದು ಒಂದು ಕಾರಣ. ಸೈಬರ್‌ ಪ್ರಕರಣಗಳ ತನಿಖೆ ನಡೆಸಲು ಅವಶ್ಯಕ ಅಧಿಕಾರಿಗಳಿಗೆ ತರಬೇತಿ ನೀಡ್ಲಾಗ್ತಿದೆ. ಅದರ ಜೊತೆಗೆ ಜನರೂ ಕೂಡ ಸಂಶಯಾಸ್ಪದ ಮೆಸೇಜ್‌ಗಳಿಗೆ ಪ್ರತಿಕ್ರಿಯೆ ಕೊಡಬಾರ್ದುʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply