ವಿದೇಶಿ ಮಾಧ್ಯಮಗಳ ವಿರುದ್ಧ ಗುಡುಗಿದ ಎಸ್‌.ಜೈಶಂಕರ್‌! ರಾಹುಲ್‌ ಗಾಂಧಿಗೆ ಟಾಂಗ್‌!

masthmagaa.com:

ಭಾರತ ಸರ್ಕಾರವನ್ನ ಪದೇ ಪದೇ ʻಹಿಂದೂ ರಾಷ್ಟ್ರೀಯವಾದಿʼ ಅಂತ ಕರಿತಿರೋ ವಿದೇಶಿ ಮಾಧ್ಯಮಗಳನ್ನ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುತೇಕ ವಿದೇಶಿ ಮಾಧ್ಯಮಗಳು ಭಾರತ ಸರ್ಕಾರವನ್ನ ಹಿಂದೂ ರಾಷ್ಟ್ರೀಯತಾವಾದಿ ಅಂತ ಉಲ್ಲೇಖ ಮಾಡ್ತವೆ. ಆದ್ರೆ ಅಮೆರಿಕ ಹಾಗೂ ಇತರ ಯುರೋಪ್‌ ದೇಶಗಳ ಸರ್ಕಾರವನ್ನ ʻಕ್ರಿಶ್ಚಿಯನ್‌ ರಾಷ್ಟ್ರೀಯವಾದಿʼ ಅಂತ ಯಾಕೆ ಕರೆಯೋದಿಲ್ಲ. ಈ ಧರ್ಮ ವಿಶೇಷಣ ಪದಗಳನ್ನ ಭಾರತಕ್ಕೆ ಮಾತ್ರ ಸೀಮಿತಿಗೊಳಿಸೋ ತರ ಕಾಣುತ್ತೆ. ಭಾರತ ಇಡೀ ವಿಶ್ವಕ್ಕಾಗಿ ಏನಾದ್ರೂ ಹೆಚ್ಚಿನದಾಗಿ ಒಳ್ಳೇದನ್ನ ಮಾಡ್ಬೇಕು ಅಂತ ಬಯಸುತ್ತೆ ಅನ್ನೋದು ವಿದೇಶಿ ಮಾಧ್ಯಮಗಳಿಗೆ ಅರ್ಥವಾಗ್ತಿಲ್ಲ ಅಂತ ಜೈಶಂಕರ್‌ ಕಿಡಿಕಾರಿದ್ದಾರೆ. ಪುಣೆಯಲ್ಲಿ ನಡೆದ ತಮ್ಮ ಪುಸ್ತಕ ʻThe India Way: Strategies for an Uncertain Worldʼ ಬಿಡುಗಡೆ ಸಮಾರಂಭದಲ್ಲಿ ವಿದೇಶಿ ಮಾಧ್ಯಮಗಳ ವಿರುದ್ಧ ಜೈ ಶಂಕರ್‌ ಈ ವಾಗ್ದಾಳಿ ಮಾಡಿದ್ದಾರೆ. ಇದೇ ವೇಳೆ ಚೀನಾವನ್ನ ಉಲ್ಲೇಖಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ, 1962 ರಲ್ಲಿ ಚೀನಾ ಆಕ್ರಮಿಸಿಕೊಂಡಿರೋ ಪ್ರದೇಶಗಳ ಬಗ್ಗೆ ಪ್ರತಿಪಕ್ಷಗಳು ಯಾಕೆ ಮಾತಾಡಲ್ಲ..? ಅಂತ ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಕೇವಲ ರಾಜಕೀಯ ಕಾರಣಗಳಿಗೆ ಚೀನಾ ವಿಚಾರದಲ್ಲಿ ಸುಳ್ಳು ಸುದ್ಧಿ ಹರಡುತ್ತಿದ್ದಾರೆ. ಚೀನಾ ಗಡಿ ಸಮಸ್ಯೆ ಇತ್ತೀಚೆಗೆ ಶುರು ಆಗಿದೆ ಅನ್ನೋ ತರ ಬಿಂಬಿಸೋಕೆ ಪ್ರಯತ್ನಿಸುತ್ತಿದ್ದಾರೆ. ಅಷ್ಟೆ ಅಲ್ದೆ ನಾನು ಗಡಿ ವಿಚಾರವಾಗಿ ಮಾಹಿತಿ ಪಡೆಯೋಕೆ ಚೀನಾ ರಾಯಭಾರಿ ಬಳಿ ಹೋಗೋದಿಲ್ಲ ಅಂತ ರಾಹುಲ್‌ ಅವ್ರ ಕಾಲೆಳೆದಿದ್ದಾರೆ. ಜೊತೆಗೆ ನನಗೆ ಮಾಹಿತಿ ಬೇಕು ಅನ್ಸಿದ್ರೆ ಭಾರತದ ಮಿಲಿಟರಿ ಹತ್ರ ಹೋಗುತ್ತೇನೆ ಹೊರತು, ಚೀನಾದ ರಾಯಭಾರಿ ಕಚೇರಿ ಕದ ತಟ್ಟೋದಿಲ್ಲ. ಹೀಗೆ ಮಾಡೋರೇ ನಮಗೆ ಬುದ್ಧಿವಾದ ಹೇಳೋಕೆ ಬರೋದು ಹಾಸ್ಯಾಸ್ಪದ ಅಂತ ಜೈಶಂಕರ್‌ ಪರೋಕ್ಷವಾಗಿ ರಾಹುಲ್‌ ಗಾಂಧಿಗೆ ಟಾಂಗ್‌ ಕೊಟ್ಟಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೈಶಂಕರ್‌, ಮಹಾಭಾರತದಲ್ಲಿ ಪಾಂಡವರು ಹೇಗೆ ತಮ್ಮ ಸಂಬಂಧಿಕರನ್ನ ಚೂಸ್‌ ಮಾಡಲಿಲ್ಲವೋ ಅದೇ ರೀತಿ ಭಾರತ ಕೂಡ ತನ್ನ ನೆರೆಹೊರೆಯವರನ್ನ ಆಯ್ಕೆ ಮಾಡೋದಕ್ಕೆ ಸಾಧ್ಯವಿಲ್ಲ..ಸ್ವಾಭಾವಿಕವಾಗಿ ಕೆಟ್ಟದರ ಮೇಲೆ ಒಳ್ಳೆಯದು ಗೆಲುವನ್ನ ಸಾಧಿಸುತ್ತೆ ಅಂತ ನಾವು ಭಾವಿಸ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply