ಕ್ರೈಸ್ತ ಧರ್ಮದಲ್ಲಿ ದೊಡ್ಡ ಬೆಳವಣಿಗೆ! ಮಹಿಳೆಯರಿಗೆ ಸಿಕ್ತು ದೊಡ್ಡ ಹಕ್ಕು!

masthmagaa.com:

ಜಗತ್ತಲ್ಲಿ ಎಲ್ಲ ಧರ್ಮಗಳಲ್ಲೂ ಮಹಿಳೆಯರನ್ನ ಎರಡನೇ ದರ್ಜೆ ನಾಗರಿಕರಂತೆ ನೊಡಲಾಗುತ್ತೆ. ಅವರು ದುರ್ಬಲರು., ಅವರಿಗೆ ನಮ್ಮ ರಕ್ಷಣೆ ಬೇಕು ಅಂತ ಪುರುಷ ಜಗತ್ತು ಅಂದುಕೊಂಡಿದೆ. ಎಲ್ಲ ಧರ್ಮಗಳಲ್ಲೂ ಈ ಸಮಸ್ಯೆ ಇದೆ. ಆದ್ರೆ ಬೇರೆ ಬೇರೆ ಪ್ರಮಾಣದಲ್ಲಿ ಹಾಗೂ ರೂಪದಲ್ಲಿದೆ. ಇದಕ್ಕೆ ಕ್ರೈಸ್ತ ಸಮುದಾಯ ಕೂಡ ಹೊರತಾಗಿಲ್ಲ. ಯುರೋಪ್ ಹಾಗೂ ಕ್ರೈಸ್ತ ಸಮುದಾಯ ಎಷ್ಟೇ ಫಾರ್ವರ್ಡ್ ಅನಿಸಿಕೊಂಡಿದ್ದರೂ ಮಹಿಳೆಯವರ ವಿಚರದಲ್ಲಿ ಅಲ್ಲೂ ಇನ್ನೂ ಸಮಸ್ಯೆ ಇದೆ ಅನ್ನೋದಕ್ಕೆ ಸಾಕ್ಷಿಯಾಗಿ ಒಂದು ಸುದ್ದಿ ಬಂದಿದೆ. ಬಿಷಪ್ ಗಳ ಜಾಗತಿಕ ಸಭೆಯಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳೆಯರಿಗೆ ವೋಟ್ ಮಾಡುವ ಅಧಿಕಾರ ಕೊಡಲಾಗಿದೆ. ಇದನ್ನ ಬಹಳ ಐತಿಹಾಸಿಕ ಅಂತ ಬಣ್ಣಿಸಲಾಗ್ತಿದೆ. ರೋಮನ್ ಕ್ಯಾಥೋಲಿಕ್ ಚರ್ಚಿನ ಅತ್ಯುನ್ನತ ನೀತಿ ನಿರ್ಧಾರದ ಮೀಟಿಂಗ್ ಇದು. ಇದರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಚಲಾವಣೆಗೆ ಪೋಪ್ ಫ್ರಾನ್ಸಿಸ್ ಅವಕಾಶ ಮಾಡ್ಕೊಟ್ಟಿದ್ದಾರೆ. ಮುಂಚೆ ಈ ಮೀಟಿಂಗ್ ಅಡೆಂಡ್ ಮಾಡ್ಬೋದಿತ್ತು. ಆದ್ರೆ ವೋಟ್ ಹಾಕೋ ಹಕ್ಕು ಮಹಿಳೆಯರಿಗೆ ಇರಲಿಲ್ಲ.

-masthmagaa.com

Contact Us for Advertisement

Leave a Reply