ಚೀನಾ-ಅಮೆರಿಕ ಭೇಟಿ: ʻಇನ್‌-ಡೆಪ್ತ್‌ ಮಾತುಕತೆ ಮುಖ್ಯವಾಗಿದೆʼ ಎಂದ ವಾಂಗ್‌ ಯಿ

masthmagaa.com:

ಚೀನಾ ಮತ್ತು ಅಮೆರಿಕ ಡೀಪ್‌ ಮಾತುಕತೆ ನಡೆಸೋದು ಮುಖ್ಯ ಅಂತ ಅಮೆರಿಕ ಪ್ರವಾಸದಲ್ಲಿರೋ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ. ಅಕ್ಟೋಬರ್‌ 26 ರಿಂದ 28 ರವರೆಗೆ ಅಮೆರಿಕ ಪ್ರವಾಸದಲ್ಲಿರೋ ವಾಂಗ್‌ ಯಿ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್‌ ಅವರನ್ನ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಚೀನಾ ಮತ್ತು ಅಮೆರಿಕ ನಡುವಿನ ಸವಾಲುಗಳನ್ನ ಉಭಯ ದೇಶಗಳು ಒಟ್ಟಿಗೆ ಬಗೆಹರಿಸಬೇಕು. ಅದ್ರಿಂದ ನಮ್ಮ ಮನಸ್ತಾಪಗಳು ದೂರವಾಗಿ, ಸಂಬಂಧ ಗಟ್ಟಿಯಾಗಲಿವೆ ಅಂತ ವಾಂಗ್‌ ಈ ಹೇಳಿದ್ದಾರೆ.

ಇನ್ನು ಚೀನಾ ವಿದೇಶಾಂಗ ಸಚಿವ ಬಾಯಲ್ಲಿ ಆ ರೀತಿ ಹೇಳಿಕೆ ಕೊಟ್ರೆ ಈ ಕಡೆ ಚೀನಾದ ವಿದೇಶಾಂಗ ಸಚಿವಾಲಯ ಅಮೆರಿಕ ವಿರುದ್ದ ಹೊಸ ಪ್ರಕಟಣೆ ಹೊರಡಿಸಿದೆ. ಚೀನಾ ಮತ್ತು ಫಿಲಿಪ್ಪೈನ್ಸ್‌ ಸಮಸ್ಯೆಗಳ ಮಧ್ಯೆ ಮೂಗು ತೂರಿಸೋಕೆ ಅಮೆರಿಕಗೆ ಯಾವುದೇ ಹಕ್ಕಿಲ್ಲ ಅಂತ ಹೇಳಿದೆ. ಮತ್ತೊಂದ್‌ ಕಡೆ ದಕ್ಷಿಣ ಚೀನಾ ಸಮುದ್ರದ ಮೇಲೆ ರೂಟಿನ್‌ ಕಾರ್ಯಾಚರಣೆ ನಡೆಸೋ ವೇಳೆ ಚೀನಾದ ಫೈಟರ್‌ ಜೆಟ್‌ವೊಂದು ಅಮೆರಿಕದ ವಿಮಾನದ ಹತ್ರ ಜಸ್ಟ್‌ 10 ಅಡಿ ಅಂತರದಲ್ಲಿ ಇನ್ನೇನು ಡಿಕ್ಕಿ ಹೊಡೆಯುತ್ತೆ ಅನ್ನೋ ಥರ ಹಾದು ಹೋಯ್ತು ಅಂತ ಅಮೆರಿಕ ಆರೋಪಿಸಿದೆ.

-masthmagaa.com

Contact Us for Advertisement

Leave a Reply