ಸುಳ್ಳು ಅತ್ಯಾಚಾರ ಆರೋಪ: 10 ವರ್ಷ ಶಿಕ್ಷೆಗೆ ಗುರಿಯಾದ ಮಹಿಳೆ

masthmagaa.com:

ಮಧ್ಯಪ್ರದೇಶದ ದೇವಾಸ್‌ ಜಿಲ್ಲೆಯ ಮಹಿಳೆಯೊಬ್ಬರು ತಮ್ಮ ಸಂಬಂಧಿಕರೊಬ್ಬರ ಮೇಲೆ ಸುಳ್ಳು ಅತ್ಯಾಚಾರದ ಆಪಾದನೆ ಮಾಡಿ ಕೇಸ್‌ ಹಾಕಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸೀಮಾ ಬಾಯಿ ಎಂಬ 45 ವರ್ಷದ ಈ ಮಹಿಳೆ ವಿಧವೆಯಾಗಿದ್ದು, ಆಸ್ತಿಯ ವಿಚಾರವಾಗಿ ತಮ್ಮ ಭಾವನ 33 ವರ್ಷದ ಮಗನ ವಿರುದ್ಧ ಸುಳ್ಳು ಕೇಸ್‌ ಹಾಕಿದ್ರು. ಜೂನ್‌ 3, 2017 ರಲ್ಲಿ ದೇವಾಸ್ ಬಳಿಯ ಭರೋತಾ ಪೊಲೀಸ್‌ ಠಾಣೆಯಲ್ಲಿಈಕೆ ದೂರು ನೀಡುವುದರ ಜೊತೆಗೆ ಸುಳ್ಳು ಸಾಕ್ಷಿಗಳನ್ನೂ ಸಹ ನೀಡಿದ್ರು. ತಕ್ಷಣವೇ ದೂರು ದಾಖಲಿಸಿಕೊಂಡ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಈ ಆಪಾದನೆ ಸುಳ್ಳು ಅಂತ ತಿಳಿದುಬಂದಿದೆ. ಈ ವಿಚಾರವಾಗಿ ಇಂದೋರ್ ಕೋರ್ಟ್‌ ಜೂನ್‌ 18, 2019ರಲ್ಲಿ ನೀಡಿದ ತೀರ್ಪಿನಲ್ಲಿ ಇದು ಸತ್ಯವಿಲ್ಲದ ಆಪಾದನೆ ಅಂತ ಹೇಳಿದೆ. ಮಹಿಳೆಯ ಮೇಲೆ ಸೆಕ್ಷನ್‌ 182, 211, ಸುಳ್ಳು ಎವಿಡೆನ್ಸ್‌ ನೀಡಿದ್ದಕ್ಕೆ ಸೆಕ್ಷನ್‌ 195ರ ಪ್ರಕಾರ ಕೇಸ್‌ ದಾಖಲಿಸಿ, 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 2000 ರೂ. ದಂಡ ಕಟ್ಟುವಂತೆ ಆದೇಶ ನೀಡಿತ್ತು. ಇಷ್ಟು ದಿನ ಬೇಲ್‌ನಲ್ಲಿ ಹೊರಗಿದ್ದ ಮಹಿಳೆ ತನಿಖೆ ಮುಗಿದು ಇತ್ತೀಚೆಗೆ ಇಂದೋರ್‌ನ ಜಿಲ್ಲಾ ನ್ಯಾಯಲಯ ನೀಡಿದ ತೀರ್ಪಿನ ಅಡಿಯಲ್ಲಿ ಈಗ ಜೈಲುಪಾಲಾಗಿದ್ದಾರೆ.

-masthmagaa.com

Contact Us for Advertisement

Leave a Reply