ದಿಲ್ಲಿ ಹಜ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ, ಆಪ್‌ಗೆ ಹಿನ್ನಡೆ!

masthmagaa.com:

ದಿಲ್ಲಿ ಹಜ್‌ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಕೌಸರ್‌ ಜಹಾನ್‌ ಆಯ್ಕೆಯಾಗಿದ್ದು, ಆಪ್‌ಗೆ ಭಾರಿ ಹಿನ್ನಡೆಯಾಗಿದೆ. ಇದೇ ವೇಳೆ ದಿಲ್ಲಿ ಇತಿಹಾಸದಲ್ಲೇ ಮಹಿಳೆಯೊಬ್ಬರು ಹಜ್‌ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗಿರೋದು ಇದು ಎರಡನೇ ಬಾರಿ. ಈ ಮೊದಲು ದಿಲ್ಲಿ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ತಾಜ್ದಾರ್ ಬಾಬರ್ ಅವರು ಇಲ್ಲಿಯವರೆಗೆ ಈ ಹುದ್ದೆಯನ್ನ ಅಲಂಕರಿಸಿದ ಏಕೈಕ ಮಹಿಳೆಯಾಗಿದ್ರು. ಅಂದ್ಹಾಗೆ ಈ ಹಜ್‌ ಸಮಿತಿ ಪ್ರತಿ ವರ್ಷ ಭಾರತೀಯ ಮುಸ್ಲಿಂರಿಗಾಗಿ ಹಜ್‌ ತೀರ್ಥಯಾತ್ರೆಯನ್ನ ಆಯೋಜಿಸುತ್ತದೆ. ಈ ಯಾತ್ರೆಯಲ್ಲಿ ಮುಸ್ಲಿಂರು ಅವ್ರ ಪವಿತ್ರ ಸ್ಥಳವಾದ ಮೆಕ್ಕಾಗೆ ಪ್ರಯಾಣಿಸುತ್ತಾರೆ.

-masthmagaa.com

Contact Us for Advertisement

Leave a Reply