ಅಮೆರಿಕ ಬಿಶಪ್‌ಗೆ ಗೇಟ್‌ಪಾಸ್‌ ಕೊಟ್ಟ ಪೋಪ್‌ ಫ್ರಾನ್ಸಿಸ್‌! ಯಾಕೆ?

masthmagaa.com:

ಅಚ್ಚರಿಯ ಬೆಳವಣಿಗೆಯಲ್ಲಿ ಪೋಪ್‌ ಫ್ರಾನ್ಸಿಸ್‌ ಅವ್ರು ಅಮೆರಿಕದ ಬಿಶಪ್‌ ಜೋಸೆಫ್‌ ಸ್ಟ್ರಿಕ್‌ಲ್ಯಾಂಡ್‌ ಅವ್ರನ್ನ ವಜಾಗೊಳಿಸಿದ್ದಾರೆ. ರೋಮನ್‌ ಕ್ಯಾಥೋಲಿಕ್‌ ಕನ್ಸರ್ವೇಟಿವ್‌ ಆಗಿದ್ದ ಜೋಸೆಫ್‌ ಸ್ಟ್ರಿಕ್‌ಲ್ಯಾಂಡ್‌ ಅವ್ರು ಪೋಪ್‌ ಅಧಿಕಾರವನ್ನ ಅವಹೇಳನ ಮಾಡಿರೋದ್ರಿಂದ ಪೋಪ್‌ ಫ್ರಾನ್ಸಿಸ್‌ ಈ ನಿರ್ಧಾರವನ್ನ ಮಾಡಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಯಾರನ್ನೂ ಈ ರೀತಿ ಕರ್ತವ್ಯದಿಂದ ವಜಾಗೊಳಿಸೋದಿಲ್ಲ. ಬದಲಾಗಿ ರಾಜಿನಾಮೆ ನೀಡುವಂತೆ ಸೂಚಿಸಲಾಗುತ್ತೆ. ಆದ್ರೆ ಈ ಪ್ರಕರಣದಲ್ಲಿ ಮಾತ್ರ ತುಂಬ ಅಪರೂಪ ಅನ್ನೋ ಹಾಗೆ ಅಮೆರಿಕಾ ಬಿಶಪ್‌ರನ್ನ ವಜಾಗೊಳಿಸಲಾಗಿದೆ. ಸದ್ಯ ಇವ್ರ ಸ್ಥಾನಕ್ಕೆ ಆಸ್ಟಿನ್‌ನ ಬಿಶಪ್‌ ಜೋ ವಾಸ್‌ಕ್ವೆಜ್‌ ಅವ್ರನ್ನ ತುಂಬಲಾಗುತ್ತೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply