ಪೆಟ್ರೋಲ್‌-ಡೀಸೆಲ್‌ ದರ ಏರಿಕೆ: ವಿಪಕ್ಷಗಳ ವಿರುದ್ಧ ಪರೋಕ್ಷವಾಗಿ ಮೋದಿ ಕಿಡಿ!

masthmagaa.com:

ವಿಪರೀತ ಏರಿಕೆ ಕಾಣ್ತಾ ಇರೋ ಪೆಟ್ರೋಲ್‌ ಡೀಸೆಲ್‌ ದರದ ಬಗ್ಗೆ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವ್ರು ಇವತ್ತು ಮಾತಾಡಿದ್ದಾರೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್‌ ಸಭೆ ನಡೆಸಿದ ಅವ್ರು, ಒಕ್ಕೂಟ ವ್ಯವಸ್ಥೆಯ ಸದಾಶಯಗಳಿಗೆ ಅನುಸಾರವಾಗಿ ಇಂಧನದ ಮೇಲಿನ ವ್ಯಾಟ್‌(VAT) ಅಂದ್ರೆ ಮೌಲ್ಯವರ್ಧಿತ ತೆರಿಗೆಯನ್ನ ಕಡಿಮೆ ಮಾಡ್ಬೇಕು. ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್‌-ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನ ಕಡಿಮೆ ಮಾಡ್ತು. ಜೊತೆಗೆ ರಾಜ್ಯ ಸರ್ಕಾರಗಳಿಗೂ ತೆರಿಗೆ ಕಡಿಮೆ ಮಾಡಿ ಅದ್ರ ಲಾಭವನ್ನ ಜನ್ರಿಗೆ ಕೊಡಿ ಅಂತ ಹೇಳ್ತು. ಕೆಲವು ರಾಜ್ಯಗಳು ಕಡಿಮೆ ಮಾಡಿದ್ವೂ ಆದ್ರೆ ಇನ್ನು ಕೆಲವು ರಾಜ್ಯಗಳು ತೆರಿಗೆ ಇಳಿಸಲಿಲ್ಲ. ಹಾಗಾಗಿ ಆ ರಾಜ್ಯಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಜಾಸ್ತಿನೇ ಇದೆ. ಇದ್ರಿಂದ ಅಲ್ಲಿನ ಜನ್ರಿಗೆ ಅನ್ಯಾಯ ಮಾಡಿದಂತೆ ಆಗಿದೆ. ಅವ್ರು ಈಗಲಾದ್ರು ತೆರಿಗೆ ಇಳಿಸಬೇಕು ಅಂತ ಹೇಳಿದ್ದಾರೆ. ಪರೋಕ್ಷವಾಗಿ ವಿರೋಧ ಪಕ್ಷಗಳು ಆಡಳಿತದಲ್ಲಿರೋ ರಾಜ್ಯಗಳು ತೆರಿಗೆ ಕಡಿಮೆ ಮಾಡಿಲ್ಲ ಅವ್ರು ಮಾಡ್ಬೇಕು ಅಂತ ಮೋದಿ ಹೇಳಿದ್ದಾರೆ. ಇನ್ನು ನಾನ್ಯಾರನ್ನೂ ಠೀಕೆ ಮಾಡ್ತಿಲ್ಲ, ಮಹರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ವ್ಯಾಟ್‌ ಕಡಿಮೆ ಮಾಡಿಲ್ಲ. ಅದ್ರ ಹೊರೆ ಅಲ್ಲಿನ ಜನ್ರ ಮೇಲೆ ಆಗ್ತಿದೆ. ಇನ್ನು ಕರ್ನಾಟಕದಂತಹ ರಾಜ್ಯಗಳು ತೆರಿಗೆ ಕಡಿಮೆ ಮಾಡ್ಲಿಲ್ಲ ಅಂದಿದ್ರೆ ಅವ್ರಿಗೆ 5 ಸಾವಿರ ಕೋಟಿ ಹೆಚ್ಚಿನ ಆದಾಯ ಸಿಗ್ತಿತ್ತು ಆದ್ರೂ ಅವ್ರು ಕಡಿಮೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ಒಕ್ಕೂಟ ವ್ಯವಸ್ಥೆಯ ಆಶಯದಂತೆ ಒಗ್ಗಟ್ಟಾಗಿ ಕೆಲ್ಸ ಮಾಡ್ಬೇಕು ಅಂತ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಇನ್ನು ಸಭೆ ನಂತ್ರ ಮಾತಾಡಿರೋ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಪ್ರಧಾನಿ ಸೆಸ್‌ ಇಳಿಕೆ ಬಗ್ಗೆ ರಾಜ್ಯದ ಉದಾಹರಣೆ ಕೊಟ್ರು, ನಮ್ಮ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡ್ಕೊಂಡು ಮತ್ತೆ ಸೆಸ್‌ ಇಳಿಸೋ ಬಗ್ಗೆ ಯೋಚ್ನೆ ಮಾಡ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply