ಅಮೆರಿಕದ ಶಾಲೆಗೆ ವಾಪಸ್ಸಾದ ನಶಿಸಿ ಹೋಗ್ತಿರೋ ಕರ್ಸಿವ್‌ ಬರಹ!

masthmagaa.com:

ಈಗಿನ ಡಿಜಿಟಲ್‌ ಯುಗದಲ್ಲಿ ಶಾಲೆಗಳಲ್ಲಿ ಕರ್ಸಿವ್‌ ರೈಟಿಂಗ್‌, ಅಂದ್ರೆ ಇಂಗ್ಲೀಷ್‌ ಅಕ್ಷರಗಳನ್ನ ಕೂಡಿಸಿ ಬರೆಯೋದು ಕಡಿಮೆಯಾಗಿದೆ. ಔಟ್‌ ಆಫ್‌ ಫ್ಯಾಶನ್‌ ಆಗೋಗಿದೆ… ಹೀಗಾಗಿ ಈ ವಿಶಿಷ್ಟ ಬರಹ ಶೈಲಿಗೆ ಮತ್ತೆ ಮರುಜೀವ ಕೊಡೋಕೆ ಅಮೆರಿಕದ ಕ್ಯಾಲಿಫೋರ್ನಿಯಾ ಸರ್ಕಾರ ಮುಂದಾಗಿದೆ. ಅಲ್ಲಿನ ಶಾಲೆಗಳಲ್ಲಿ ಕರ್ಸಿವ್‌ ಬರಹವನ್ನ ಖಡ್ಡಾಯವಾಗಿ ಕಲಿಸಬೇಕು ಅಂತ ಬಿಲ್‌ ಒಂದನ್ನ ಪಾಸ್‌ ಮಾಡಿದೆ. ಅಂದ್ಹಾಗೆ ಎಕ್ಸ್‌ಪರ್ಟ್ಸ್‌ ಪ್ರಕಾರ, ಕರ್ಸಿವ್‌ ರೈಟಿಂಗ್‌ ಕಲಿಯೋದ್ರಿಂದ ಮಕ್ಕಳಲ್ಲಿ ವಿಷಯಗಳನ್ನ ಅರ್ಥ ಮಾಡ್ಕೊಳ್ಳೊ ಸಾಮರ್ಥ್ಯ ಹೆಚ್ಚುತ್ತೆ. ಮತ್ತವ್ರ ಯೋಚನಾ ಶಕ್ತಿ ಇಂಪ್ರೂವ್‌ ಆಗುತ್ತೆ. ಹಳೇ ಬರವಣಿಗೆಗಳನ್ನ ಸಲೀಸಾಗಿ ಅರ್ಥ ಮಾಡ್ಕೊಳ್ಳೋಕೆ ಸಹಾಯವಾಗುತ್ತೆ. ಅಲ್ದೇ ಕೈ, ಬೆರಳುಗಳನ್ನ ಬಳಸಿ ಮಾಡೋ ಸೂಕ್ಷ್ಮ ಕೆಲಸವನ್ನ ಇನ್ನಷ್ಟು ಚುರುಕಾಗಿಸೋಕೆ ಹೆಲ್ಪ್‌ ಆಗುತ್ತೆ ಅಂತ ತಜ್ಞರು ಹೇಳಿದ್ದಾರೆ ಎನ್ನಲಾಗಿದೆ. ಒಟ್ಟಾರೆ ನಶಿಸಿ ಹೋಗ್ತಿರೋ ಈ ರೈಟಿಂಗ್‌ ಸ್ಕಿಲ್‌ನ ಅಮೆರಿಕದ ರಾಜ್ಯ ಮುಂದಿನ ಪೀಳಿಗೆಗೂ ಪರಿಚಯಿಸೋ ಪ್ರಯತ್ನ ಮಾಡ್ತಿದೆ.

-masthmagaa.com

Contact Us for Advertisement

Leave a Reply