ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ರೋಹಿತ್‌ ಶರ್ಮಾ! ಏನದು?

masthmagaa.com:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಭಾರತ ಭರ್ಜರಿ ಗೆಲುವು ಸಾಧಿಸಿದ್ದು ಈ ಮೂಲಕ ಸರಣಿ ಭಾರತದ ಕೈವಶವಾಗಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 170 ರನ್ ಗಳಿಸಿತ್ತು. ಇಂಗ್ಲೆಂಡ್ ಬೆನ್ನತ್ತಿ ಹೊರಟ ಆಂಗ್ಲರು 17 ಓವರ್‌ಗಳಲ್ಲಿ 121 ರನ್ ಗಳಿಸಲಷ್ಟೇ ಶಕ್ತವಾದ್ರು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2- 0 ಮುನ್ನಡೆ ಸಾಧಿಸಿದೆ. ‌ಇನ್ನು ಈ ಪಂದ್ಯದಲ್ಲಿ ರೋಹಿತ್‌ ಶರ್ಮಾ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಟಿ 20 ಪಂದ್ಯದಲ್ಲಿ 300 ಬೌಂಡರಿಗಳನ್ನ ಬಾರಿಸಿದ ಭಾರತದ ಮೊದಲ ಹಾಗೂ ಜಗತ್ತಿನ ಎರಡನೇ ಕ್ರಿಕೆಟಿಗ ಅಂತ ಕರೆಸಿಕೊಂಡಿದ್ದಾರೆ. 325 ಬೌಂಡರಿಗಳನ್ನ ಬಾರಿಸೋ ಮೂಲಕ ಐರ್ಲೆಂಡ್‌ನ ಸ್ಟಾರ್‌ ಆಟಗಾರ ಪಾಲ್‌ ಸ್ಟರ್ಲಿಂಗ್‌ ಮೊದಲ ಸ್ಥಾನದಲ್ಲೇ ಇದ್ದಾರೆ.

-masthmagaa.com

Contact Us for Advertisement

Leave a Reply