ಭಾರತ-ಇಂಗ್ಲೆಂಡ್‌ 3ನೇ ಟೆಸ್ಟ್: 200ನೇ ವಿಕೆಟ್‌ ಪಡೆದ ಜಡೇಜಾ

masthmagaa.com:

ರಾಜ್‌ಕೋಟ್‌ನಲ್ಲಿ ನಡೀತಿರೋ ಭಾರತ-ಇಂಗ್ಲೆಂಡ್‌ ನಡುವಿನ ತೃತೀಯ ಟೆಸ್ಟ್‌ನ 3ನೇ ದಿನ ಟೀಮ್‌ ಇಂಡಿಯಾ ಆಟಗಾರರು ಕಪ್ಪು ತೋಳು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ರು. ಈ ಮೂಲಕ ಇತ್ತೀಚಿಗೆ ನಿಧನರಾದ ಭಾರತದ ಮಾಜಿ ಕ್ರಿಕೆಟರ್‌ ದತ್ತಾಜಿರಾವ್‌ ಗಾಯಕ್ವಾಡ್‌ ನಿಧನಕ್ಕೆ ಸಂತಾಪ ಸೂಚಿಸಿದ್ರು. ಇನ್ನೂ 3ನೇ ದಿನದ ಆರಂಭದಲ್ಲಿ ಆಂಗ್ಲ ಪಡೆ 319 ರನ್‌ಗೆ ಆಲೌಟ್‌ ಆಯ್ತು. ಈ ವೇಳೆ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 200ನೇ ವಿಕೆಟ್‌ ಪಡೆದು ದಾಖಲೆ ಬರೆದ್ರು. ಇನ್ನು ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರೋ ಟೀಮ್‌ ಇಂಡಿಯಾ ಉತ್ತಮ ಆಟವಾಡ್ತಿದೆ. ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಭರ್ಜರಿ ಶತಕ ದಾಖಲಿಸಿ 104 ರನ್‌ ಬಾರಿಸಿ ಬೆನ್ನುನೋವಿನಿಂದಾಗಿ ರಿಟೈಡ್‌ ಹರ್ಟ್‌ ಆದ್ರು. ಅಂದ್ಹಾಗೆ ಜೈಸ್ವಲ್‌ ಈ ಸೀರೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸರಣಿಯಲ್ಲಿ ಈಗಾಗ್ಲೆ ಜೈಸ್ವಲ್‌ ಒಂದು ದ್ವಿಶತಕ ಹಾಗೂ ಒಂದು ಶತಕದ ಜೊತೆಗೆ 435 ರನ್‌ ಗಳಿಸಿದ್ದಾರೆ. ಓಪನಿಂಗ್‌ನಲ್ಲಿ ಅಗ್ರೆಸಿವ್‌ ಇಂಟೆಂಟ್‌ ತೋರಿಸೋ ಜೈಸ್ವಲ್‌ 76.45ರ ಸ್ಟ್ರೈಕ್‌ ರೇಟ್‌, 72.50ಯ ಆವರೇಜ್‌ನಲ್ಲಿ ರನ್‌ ಗಳಿಸಿದ್ದಾರೆ. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್‌ ಗಳಿಸಿದ್ದ ಜೈಸ್ವಲ್‌, ಸೀರೀಸ್‌ ಪೂರ ಅದೇ ಮೊಮೆಂಟಮ್‌ನಲ್ಲಿ ಆಡ್ತಿದ್ದಾರೆ. ಎರಡನೇ ಪಂದ್ಯದಲ್ಲಿ ಬೇರೆ ಬ್ಯಾಟರ್‌ಗಳು ಸ್ಟ್ರಗಲ್‌ ಮಾಡ್ತಿದ್ರೆ, ಒಂದು ಎಂಡ್‌ನಲ್ಲಿ ಜೈಸ್ವಲ್‌ ನಿಂತು ಇಂಗ್ಲೆಂಡ್‌ ಬೌಲರ್‌ಗಳನ್ನ ಕಾಡಿದ್ರು. ಈಗ ಮೂರನೇ ಪಂದ್ಯದಲ್ಲೂ ಜೈಸ್ವಲ್‌ ಮಿಂಚಿದ್ದಾರೆ. ಇಂದು 78.20ರ ಸ್ಟ್ರೈಕ್‌ ರೇಟ್‌ನಲ್ಲಿ ಜೈಸ್ವಲ್‌ ಆಡಿದ್ದಾರೆ. ಇನ್ನು ಭಾರತ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 196 ರನ್‌ ಕೆಲೆಹಾಕಿದೆ. ಈ ಮೂಲಕ 322 ರನ್‌ಗಳ ಮುನ್ನಡೆ ಸಾಧಿಸಿದೆ. ಭಾರತದ ಪರ 65 ರನ್‌ ಗಳಿಸಿರೊ ಶುಭಮನ್‌ ಗಿಲ್‌ ಜೊತೆಗೆ ನೈಟ್‌ ವಾಚ್‌ಮನ್‌ ಕುಲ್ದೀಪ್‌ ಯಾದವ್‌ 4 ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್‌ ಕಾಯ್ದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply