ಎರಡನೇ ಟೆಸ್ಟ್‌ನಲ್ಲಿ ಭಾರತಕ್ಕೆ ಜಯ, ಅಶ್ವಿನ್‌ ಹೊಸ ದಾಖಲೆ!

masthmagaa.com:

ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 106 ರಳಿಂದ ವಿನ್‌ ಆಗಿದೆ. ನಾಲ್ಕನೆ ಇನ್ನಿಂಗ್ಸ್‌ನಲ್ಲಿ 399 ರನ್‌ಗಳ ಟಾರ್ಗೆಟ್‌ ಚೇಸ್‌ ಮಾಡ್ತಿದ್ದ ಆಂಗ್ಲರನ್ನ ಭಾರತೀಯ ಬೌಲರ್‌ಗಳು 292 ರನ್‌ಗೆ ಕಟ್ಟಾಕಿದ್ದಾರೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅಶ್ವಿನ್‌ ಹಾಗೂ ಬುಮ್ರಾ ತಲಾ ಮೂರು ವಿಕೆಟ್‌ ಪಡೆದು ಗೆಲುವಿನ ದಡ ಸೇರಿಸಿದ್ದಾರೆ. ಈ ವೇಳೆ ಅಶ್ವಿನ್‌ ಇಂಗ್ಲೆಂಡ್‌ ವಿರುದ್ಧದ ತಮ್ಮ 96ನೇ ಪಡೆದು, ಇಂಗ್ಲೆಂಡ್‌ ವಿರುದ್ಧ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಎನಿಸಿಕೊಂಡಿದ್ದಾರೆ. ಅವ್ರು ಭಾಗವತ್ ಚಂದ್ರಶೇಖರ್‌ ಅವ್ರ ರೆಕಾರ್ಡ್‌ ಬ್ರೇಕ್‌ ಮಾಡಿದ್ದಾರೆ.‌ ಮ್ಯಾಚ್‌ನಲ್ಲಿ 9 ವಿಕೆಟ್‌ ಪಡೆದ ಬುಮ್ರಾ ಮ್ಯಾನ್‌ ಆಫ್‌ ದ ಮ್ಯಾಚ್‌ ಆಗಿದ್ದಾರೆ.

-masthmagaa.com

Contact Us for Advertisement

Leave a Reply