ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಫೈನಲ್‌ ತಲುಪಿದ ಭಾರತೀಯ ಮಹಿಳಾ ತಂಡ!

masthmagaa.com:

ಮಹಿಳೆಯರ ಏಷ್ಯಾ ಕಪ್‌ ಟಿ20ಯಲ್ಲಿ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ ವಿರುದ್ದ 74 ರನ್‌ ಅಂತರದಲ್ಲಿ ಸುಲಭ ಜಯ ಸಾಧಿಸಿ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ಇನ್ನಿಂಗ್ಸ್‌ ಆರಂಭಿಸಿದ ಹರ್ಮನ್‌ ಪ್ರೀತ್‌ ಕೌರ್‌ ಪಡೆ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 148 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಥಾಯ್ಲೆಂಡ್‌ ತಂಡ 9 ವಿಕೆಟ್‌ ನಷ್ಟಕ್ಕೆ ಕೇವಲ 74ರನ್‌ ಗಳಿಸಿ ಹಿನ್ನಡೆ ಅನುಭವಿಸಿತು. ಇನ್ನು ಇಂದು ನಡೆದ ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಲಂಕಾ ಪಡೆ ರೋಚಕವಾಗಿ ಪಾಕ್‌ ಮಹಿಳಾ ತಂಡವನ್ನ ಕೇವಲ ಒಂದು ರನ್‌ನಿಂದ ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಭಾರತ ಹಾಗೂ ಲಂಕಾ ಮಹಿಳಾ ತಂಡಗಳು ಅಕ್ಟೋಬರ್‌ 15ರಂದು ಫೈನಲ್‌ನಲ್ಲಿ ಎದುರಾಗಲಿವೆ. ಇನ್ನು ಮುಂದಿನ ವರ್ಷದಿಂದ ಬಹಳ ದೀರ್ಘಕಾಲದಿಂದ ಬೇಡಿಕೆಯಲ್ಲಿದ್ದ ಮಹಿಳಾ ಐಪಿಎಲ್‌ ಶುರುವಾಗಲಿದ್ದು ಇದ್ರಲ್ಲಿ ಐದು ತಂಡಗಳು ಇರಲಿವೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply